63ನೇ ಫಿಲ್ಮ್ ಫೇರ್ ಅವಾರ್ಡ್: ಅತ್ಯುತ್ತಮ ನಟ, ನಟಿ ಪ್ರಶಸ್ತಿ ಗೆದ್ದವರು ಯಾರು ಗೊತ್ತಾ?

Update: 2018-01-21 06:14 GMT

ಮುಂಬೈ, ಜ.21: 63ನೇ ಜಿಯೋ ಫಿಲ್ಮ್ ಫೇರ್ ಪ್ರಶಸ್ತಿ ಪ್ರಕಟಗೊಂಡಿದ್ದು, 'ಹಿಂದಿ ಮೀಡಿಯಂ’ ಅತ್ಯುತ್ತಮ ಚಿತ್ರ  ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದೇ ಚಿತ್ರದ ನಟ ಬಾಲಿವುಡ್ ನ ಇರ್ಫಾನ್ ಖಾನ್ ಅತ್ಯುತ್ತಮ ನಟ ಮತ್ತು ‘ತುಮಾರಿ ಸುಲು’ ಚಿತ್ರದ ನಟಿ ವಿದ್ಯಾಬಾಲನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

63ನೇ ಫಿಲ್ಮ್ ಫೇರ್ ಅವಾರ್ಡ್ ಸಮಾರಂಭ ಮುಂಬೈನಲ್ಲಿ ನಡೆದಿದ್ದು, ಹಿಂದಿ ಸಿನಿಮಾ ರಂಗದ ದಿಗ್ಗಜರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಕಾರ್ಯಕ್ರಮ ನಿರೂಪಿಸಿದರು.

ಉತ್ತಮ ಚಿತ್ರ: ಹಿಂದಿ ಮೀಡಿಯಂ, ವಿಮರ್ಶಕರ ಅವಾರ್ಡ್ ಗಳಿಸಿದ ಉತ್ತಮ ಚಿತ್ರ: ನ್ಯೂಟನ್, ಉತ್ತಮ ನಟಿ: ವಿದ್ಯಾ ಬಾಲನ್ (ತುಮ್ಹಾರಿ ಸುಲು), ಉತ್ತಮ ನಟ: ಇರ್ಫಾನ್ ಖಾನ್ (ಹಿಂದಿ ಮೀಡಿಯಂ), ಉತ್ತಮ ನಟ (ವಿಮರ್ಶಕರ ಆಯ್ಕೆ): ರಾಜ್ ಕುಮಾರ್ ರಾವ್ (ಟ್ರ್ಯಾಪ್ಡ್ ), ಉತ್ತಮ ನಟಿ (ವಿಮರ್ಶಕರ ಆಯ್ಕೆ): ಝೈರಾ ವಾಸಿಂ (ಸೀಕ್ರೆಟ್ ಸೂಪರ್ ಸ್ಟಾರ್), ಉತ್ತಮ ನಿರ್ದೇಶಕ: ಅಶ್ವಿನಿ ಅಯ್ಯರ್ ತಿವಾರಿ (ಬರೇಲಿ ಕಿ ಬರ್ಫಿ), ಉತ್ತಮ ಚೊಚ್ಚಲ ನಿರ್ದೇಶಕ: ಕೊಂಕೊಣಾ ಸೇನ್ ಶರ್ಮಾ (ಎ ಡೆತ್ ಇನ್ ದ ಗುಂಜ್ ), ಉತ್ತಮ ಪೋಷಕ ನಟ: ರಾಜ್ ಕುಮಾರ್ ರಾವ್ (ಬರೇಲಿ ಕಿ ಬರ್ಫಿ), ಉತ್ತಮ ಪೋಷಕ ನಟಿ: ಮೆಹೆರ್ ವಿಜ್ (ಸೀಕ್ರೆಟ್ ಸೂಪರ್ ಸ್ಟಾರ್), ಉತ್ತಮ ಸಂಭಾಷಣೆ: ಹಿತೇಶ್ ಕೇವಲ್ಯ (ಶುಭ್ ಮಂಗಲ್ ಸಾವ್ ಧಾನ್), ಉತ್ತಮ ಚಿತ್ರಕತೆ: ಶುಭಾಶಿಶ್ ಭುತಿಯಾನಿ (ಮುಕ್ತಿ ಭವನ್). ಉತ್ತಮ ಮ್ಯೂಸಿಕ್ ಆಲ್ಬಮ್: ಪ್ರೀತಂ (ಜಗ್ಗಾ ಜಾಸೂಸ್).

ಉತ್ತಮ ಹಿನ್ನೆಲೆ ಗಾಯಕ: ಅರ್ಜಿತ್ ಸಿಂಗ್ (ರೋಕೆ ನಾ ರುಕೆ ನೈನಾ-ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರ)

ಉತ್ತಮ ಹಿನ್ನೆಲೆ ಗಾಯಕಿ: ಮೇಘನಾ ಮಿಶ್ರಾ (ನಚ್ಡಿ ಫಿರಾ-ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರ)

ಜೀವಮಾನ ಸಾಧನೆ ಪ್ರಶಸ್ತಿ: ಮಾಲಾ ಸಿನ್ಹಾ ಹಾಗು ಬಪ್ಪಿ ಲಹಿರಿ

ಉತ್ತಮ ಹಿನ್ನೆಲೆ ಸಂಗೀತ: ಪ್ರೀತಂ (ಜಗ್ಗಾ ಜಾಸೂಸ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News