ಹಸೆಮಣೆಯೇರಿದ ಬಹುಭಾಷಾ ನಟಿ ಭಾವನಾ

Update: 2018-01-22 10:35 GMT

ತಿರುವನಂತಪುರಂ, ಜ.22: ಬಹುಭಾಷಾ ನಟಿ ಭಾವನಾ ಹಾಗು ಕನ್ನಡ ಚಿತ್ರ ನಿರ್ಮಾಪಕ ನವೀನ್ ಅವರ ವಿವಾಹವು ಕುಟುಂಬಸ್ಥರ, ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು.

ಕೇರಳದ ತ್ರಿಶೂರಿನ ತಿರುವಂಬಾಡಿ ದೇವಸ್ಥಾನದಲ್ಲಿ  ಕೇರಳ ಶೈಲಿಯಲ್ಲಿ ಮದುವೆ ಸಮಾರಂಭ  ನಡೆಯಿತು. ಕೆಲ ವರ್ಷಗಳಿಂದ ನವೀನ್ ಹಾಗು ಭಾವನಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಅವರ ನಿಶ್ಚಿತಾರ್ಥ ನೆರವೇರಿತ್ತು.

ಮದುಮಗಳು ಭಾವನಾರಿಗೆ ಚಿತ್ರರಂಗದ ಹಲವರು ಟ್ವಿಟರ್ ನಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾವನಾ ಮಲಯಾಳಂ, ತಮಿಳು, ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ರೋಮಿಯೋ, ಜಾಕಿ, ಟಗರು ಸೇರಿದಂತೆ ಹಲವು ಚಿತ್ರಗಳಲ್ಲಿ ಭಾವನಾ ನಟಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News