×
Ad

ಭಾರತದ ಯಾವುದೇ ‘ಆಕ್ರಮಣ’ಕ್ಕೆ ತಕ್ಕ ಪ್ರತಿಕ್ರಿಯೆ: ಪಾಕ್ ಸೇನಾ ಮುಖ್ಯಸ್ಥ

Update: 2018-01-23 22:25 IST

ಇಸ್ಲಾಮಾಬಾದ್, ಜ. 23: ಭಾರತದ ಯಾವುದೇ ‘ಆಕ್ರಮಣ’ ಅಥವಾ ‘ದುಸ್ಸಾಹಸ’ಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವ ಸೋಮವಾರ ಹೇಳಿದ್ದಾರೆ.

 ಖುಯಿರಟ್ಟ ಮತ್ತು ರಟ್ಟ ಅರಾಯನ್ ವಲಯಗಳಲ್ಲಿರುವ ನಿಯಂತ್ರಣ ರೇಖೆ ಮತ್ತು ವಾಸ್ತವಿಕ ಗಡಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದರು ಎಂದು ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ತಿಳಿದಿದೆ.

‘‘2003ರ ಯುದ್ಧವಿರಾಮ ಒಪ್ಪಂದವನ್ನು ಅನುಸರಿಸುವ ನಮ್ಮ ಬದ್ಧತೆಯನ್ನು ನಮ್ಮ ದೌರ್ಬಲ್ಯ ಎಂಬುದಾಗಿ ತಪ್ಪು ಭಾವಿಸಬಾರದು. ಭಾರತೀಯ ಆಕ್ರಮಣ ಮತ್ತು ದುಸ್ಸಾಹಗಳಿಗೆ ಯಾವಾಗಲೂ ತಕ್ಕ ಪ್ರತಿಕ್ರಿಯೆಯನ್ನು ನೀಡಲಾಗುತ್ತದೆ’’ ಎಂದು ಜ. ಬಾಜ್ವ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News