×
Ad

ಫ್ರಾನ್ಸ್‌ನಲ್ಲಿ ಇನ್ನು ಜನರು ತಪ್ಪು ಮಾಡಬಹುದು!

Update: 2018-01-24 22:34 IST

ಪ್ಯಾರಿಸ್, ಜ. 24: ಸರಕಾರದೊಂದಿಗೆ ವ್ಯವಹರಿಸುವಾಗ ‘ತಪ್ಪುಗಳನ್ನು ಮಾಡುವ ಹಕ್ಕನ್ನು’ ಫ್ರಾನ್ಸ್ ಸಂಸತ್ತು ಜನರಿಗೆ ನೀಡಿದೆ. ಇಂಥ ತಪ್ಪುಗಳಿಗೆ ಜನರನ್ನು ಶಿಕ್ಷಿಸಲಾಗುವುದಿಲ್ಲ.

ನೂತನ ಕಾನೂನೊಂದಕ್ಕೆ ಸೇರ್ಪಡೆಗೊಳಿಸಲಾದ ಈ ವಿಧಿಯು ‘ನಂಬಿಕಸ್ತ ಸಮಾಜವೊಂದಕ್ಕೆ ಸರಕಾರ ಮಾಡಬಹುದಾದ ಮಹತ್ವದ ಸೇವೆಯಾಗಿದೆ’ ಎಂದು ಸರಕಾರ ಹೇಳಿದೆ.

ಫ್ರಾನ್ಸ್ ಸಂಸತ್ತು ನ್ಯಾಶನಲ್ ಅಸೆಂಬ್ಲಿಯಲ್ಲಿ ಮಂಗಳವಾರ ರಾತ್ರಿ ಸಂಸದರು ಕೈಎತ್ತುವ ಮೂಲಕ ಈ ಕಾನೂನಿಗೆ ಅಂಗೀಕಾರ ನೀಡಿದರು.

 ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ತನ್ನ ಚುನಾವಣಾ ಪ್ರಚಾರದ ಅವಧಿಯಲ್ಲಿ ಭರವಸೆ ನೀಡಿದ ಸುಧಾರಣೆಗಳ ಭಾಗ ಇದಾಗಿದೆ.

ಈ ವಿಧಿಯ ಪ್ರಕಾರ, ನಾಗರಿಕರು ಸರಕಾರದ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ‘ಉತ್ತಮ ನಂಬಿಕೆ’ಯಲ್ಲಿ ತಪ್ಪುಗಳನ್ನು ಮಾಡಬಹುದು ಹಾಗೂ ಇದಕ್ಕಾಗಿ ಶಿಕ್ಷೆಗೆ ಒಳಗಾಗುವ ಭೀತಿಯಿರುವುದಿಲ್ಲ.

ಆದರೆ, ಸಂಬಂಧಪಟ್ಟ ವ್ಯಕ್ತಿಯು ‘ಕೆಟ್ಟ ನಂಬಿಕೆ’ಯಿಂದ ಕೃತ್ಯವೆಸಗಿದ್ದಾನೆ ಎನ್ನುವುದು ಸಾಬೀತಾದರೆ ಶಿಕ್ಷೆಯಿದೆ. ಆದಾಗ್ಯೂ, ಇದನ್ನು ಅಧಿಕಾರಿಗಳು ಸಾಬೀತುಪಡಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News