ಟೆಹ್ರಾನ್‌ನಲ್ಲಿ 'ಸುಲ್ತಾನ್'ಗೆ ಪ್ರಶಸ್ತಿಗಳ ಸಿಂಹಪಾಲು

Update: 2018-01-26 12:17 GMT

ಸಲ್ಮಾನ್‌ಖಾನ್ ಅಭಿನಯದ ‘ಟೈಗರ್ ಜಿಂದಾ ಹೈ’, ಗಳಿಕೆಯಲ್ಲಿ ಬಾಲಿವುಡ್ ಚಿತ್ರರಂಗದ ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಇದರ ಜೊತೆಜೊತೆಗೆ ಸಲ್ಮಾನ್‌ಗೆ ದುಪ್ಪಟ್ಟು ಖುಷಿ ನೀಡುವಂತಹ ಇನ್ನೊಂದು ಸುದ್ದಿ ಬಂದಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಕ್ರೀಡಾ ಚಿತ್ರೋತ್ಸವದಲ್ಲಿ, 2016ರಲ್ಲಿ ತೆರೆಕಂಡ ಸುಲ್ತಾನ್ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ನಟ (ಸಲ್ಮಾನ್‌ಖಾನ್), ಶ್ರೇಷ್ಠ ನಟಿ (ಅನುಷ್ಕಾ ಶರ್ಮಾ) ಹಾಗೂ ಶ್ರೇಷ್ಠ ನಿರ್ದೇಶಕ (ಅಲಿ ಅಬ್ಬಾಸ್ ಝಫರ್) ಪ್ರಶಸ್ತಿಗಳನ್ನು ಗಳಿಸಿದೆ.

2016ರ ಜುಲೈ 6ರಂದು ಬಿಡುಗಡೆಯಾಗಿದ್ದ ಸುಲ್ತಾನ್ ಭರ್ಜರಿ ಯಶಸ್ಸು ಕಂಡಿತ್ತು ಹಾಗೂ ವಿಶ್ವಾದ್ಯಂತ 589.25 ಕೋಟಿ ರೂ. ಗಳಿಸಿತ್ತು. ಆ ಸಮಯದಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೂರನೆ ಅತ್ಯಧಿಕ ಗಳಿಕೆಯ ಚಿತ್ರವೆಂಬ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು.

ಸುಲ್ತಾನ್ ಚಿತ್ರವು, ಖ್ಯಾತ ಕುಸ್ತಿಪಟು ಸುಲ್ತಾನ್ ಅಲಿ ಖಾನ್‌ನ ಜೀವನಕಥೆಯನ್ನು ಆಧರಿಸಿದೆ ಪುತ್ರನ ಸಾವಿನ ಬಳಿಕ ಕುಸ್ತಿ ಕ್ರೀಡೆಗೆ ವಿದಾಯ ಹೇಳಿದ್ದ ಸುಲ್ತಾನ್, ಆನಂತರ ಆತ ತನ್ನ ಪತ್ನಿಯ ಗೌರವ ಹಾಗೂ ಪ್ರೀತಿಯನ್ನು ಪಡೆಯುವುದಕ್ಕಾಗಿ ಮತ್ತೆ ಕುಸ್ತಿ ಅಖಾಡಕ್ಕೆ ಇಳಿಯುವ ಕಥಾವಸ್ತುವನ್ನು ಅದು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News