ಮಾಯಾಬಝಾರ್ ನಲ್ಲಿ ಪುನೀತ್

Update: 2018-01-26 12:20 GMT

ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್, ರಾಜ್‌ಕುಮಾರ ಚಿತ್ರದ ಮೂಲಕ ತಾನೋರ್ವ ‘ಬಾಕ್ಸ್‌ಆಫೀಸ್ ಕಿಂಗ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ‘ಅಂಜನಿಪುತ್ರ’ ಕೂಡಾ ಹಣಗಳಿಕೆಯಲ್ಲಿ ಪರವಾಗಿಲ್ಲ ಎನಿಸಿಕೊಂಡಿದೆ. ಇದೀಗ ಪುನೀತ್, ತನ್ನ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಿಸಲಿರುವ ‘ಮಾಯಾಬಝಾರ್’ ಕಳೆದ ವಾರ ಸೆಟ್ಟೇರಿದೆ. ‘ಮಾಯಾಬಝಾರ್’ ಎಂದ ಕೂಡಲೇ ಕನ್ನಡ ಚಿತ್ರರಸಿಕರಿಗೆ 1965ರಲ್ಲಿ ತೆರೆಕಂಡ, ಇದೇ ಹೆಸರಿನ ಪೌರಾಣಿಕ ಕಥಾಚಿತ್ರ ಹಾಗೂ ಅದರ ಹಾಡುಗಳು ಇಂದಿಗೂ ನೆನಪಾಗುತ್ತಿವೆ. ಆದರೆ ಹೆಸರೊಂದನ್ನು ಬಿಟ್ಟರೆ, ಆಗಿನ ಮಾಯಾಬಝಾರ್‌ಗೂ, ಪುನೀತ್ ಅಭಿನಯದ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಅಪ್ಪಟ ಆ್ಯಕ್ಷನ್ ಚಿತ್ರವಾದ ಪುನೀತ್‌ರ ಮಾಯಾಬಝಾರ್‌ನಲ್ಲಿ ಪ್ರತಿಭಾವಂತ ನಟರ ದಂಡೇ ಇದೆ. ಒಂದು ಮೊಟ್ಟೆ ಖ್ಯಾತಿಯ ರಾಜ್‌ಶೆಟ್ಟಿ, ಪ್ರಕಾಶ್ ರೈ, ವಶಿಷ್ಠ ಸಿಂಹನಟಿಸಲಿರುವ ಈ ಚಿತ್ರವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಲಿದ್ದಾರೆ. ನಾಯಕಿ ನಟಿಯ ಆಯ್ಕೆ ಇನ್ನೂ ಆಗಿಲ್ಲ. ಈ ನಡುವೆ ಪುನೀತ್ ನಿರ್ಮಾಣದ ‘ಕವಲುದಾರಿ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್, ಕವಲುದಾರಿಗೆ ನಿರ್ದೇಶಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News