×
Ad

ಗೋಡೆಯ ಮೇಲೆ ಮಾನವ ರುಂಡ ಪತ್ತೆ

Update: 2018-01-29 20:28 IST
ಸಾಂದರ್ಭಿಕ ಚಿತ್ರ

 ಹೈದರಾಬಾದ್, ಜ. 29: ತೆಲಂಗಾಣದ ನಲಗೊಂಡ ಪಟ್ಟಣದಲ್ಲಿ ಸೋಮವಾರ ಪುರುಷನೋರ್ವನ ರುಂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಬೊಟ್ಟುಗುಡದ ರಸ್ತೆ ಬದಿಯ ಧಾರ್ಮಿಕ ಕಟ್ಟಡವೊಂದರ ಗೋಡೆಯ ಮೇಲೆ ರುಂಡ ಇರಿಸಲಾಗಿದೆ. ಮುಂಡವಿಲ್ಲದ ರುಂಡ ನೋಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರುಂಡವನ್ನು 25ರ ಹರೆಯದ ಪಿ. ರಮೇಶ್ ಅವರದ್ದು ಎಂದು ಗುರುತಿಸಲಾಗಿದೆ. ಮುಂಡ ಇದುವರೆಗೆ ಪತ್ತೆಯಾಗಿಲ್ಲ. ದುಷ್ಕರ್ಮಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ. ಪೊಲೀಸ್ ನಾಯಿಗಳು ಕೂಡ ಸ್ಥಳಕ್ಕೆ ಆಗಮಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  ಟ್ರಾಕ್ಟರ್ ಚಾಲಕರಾಗಿರುವ ರಮೇಶ್ ರವಿವಾರ ರಾತ್ರಿ ಔಷಧ ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರನ್ನು ಅಮಾನುಷವಾಗಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News