×
Ad

ಪಕ್ಷ ವಿರೋಧಿ ಚಟುವಟಿಕೆ: ಬಿಎಸ್ಪಿಯ ಇಬ್ಬರು ನಾಯಕರ ಉಚ್ಚಾಟನೆ

Update: 2018-01-29 23:31 IST

ಮುಝಫರ್‌ನಗರ, ಜ.29: ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪದಲ್ಲಿ ಬಹುಜನ ಸಮಾಜ ಪಕ್ಷವು ಪುರ್ಕಳಿ ಕ್ಷೇತ್ರದ ಮಾಜಿ ಶಾಸಕ ಅನಿಲ್ ಕುಮಾರ್ ಸೇರಿದಂತೆ ಇಬ್ಬರು ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದೆ. ಪಕ್ಷದ ಹೈಕಮಾಂಡ್ ಆದೇಶದಂತೆ ಅನಿಲ್ ಕುಮಾರ್ ಹಾಗೂ ಸಂಚಾಲಕರಾದ ಡಾ. ಪುರುಷೋತ್ತಮ್ ಅವರನ್ನು ರವಿವಾರದಂದು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಎಸ್ಪಿ ಜಿಲ್ಲಾ ಮುಖ್ಯಸ್ಥ ಪ್ರೇಮಚಂದ್ ಗೋತಮ್ ತಿಳಿಸಿದ್ದಾರೆ. ಮುಝಫರ್‌ನಗರದ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಪುರ್ಕಳಿ ಒಂದಾಗಿದೆ. 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನಿಲ್ ಕುಮಾರ್ ಈ ಕ್ಷೇತ್ರದಿಂದ ಬಿಎಸ್ಪಿ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News