×
Ad

ಅಸಹಿಷ್ಣುತೆ ಇರಬಾರದು: ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್

Update: 2018-01-30 22:42 IST

ಜೈಪುರ, ಜ. 30: ತಾನು ಎಲ್ಲ ಧರ್ಮಗಳ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದು, ಅಸಹಿಷ್ಣುತೆ ಇರಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಮಂಗಳವಾರ ಹೇಳಿದ್ದಾರೆ.

 ಋಗ್ವೇದ, ಭಗವದ್ಗೀತೆ, ಮಹಾಭಾರತ, ಕುರ್‌ಆನ್, ಬೈಬಲ್, ಸತ್ಯಾರ್ಥ ಪ್ರಕಾಶ, ಗುರು ಗ್ರಂಥ ಸಾಹೀಬ್ ಅನ್ನು ನಾನು ಓದುತ್ತಿದ್ದೇನೆ. ಜಗತ್ತಿನ ಎಲ್ಲ ಧರ್ಮಗ್ರಂಥಗಳು ಕೂಡ ಉತ್ತಮವಾದುದನ್ನೇ ಹೇಳುತ್ತವೆ. ದ್ವೇಷಕ್ಕೆ ಯಾವ ಧರ್ಮದಲ್ಲಿ ಕೂಡ ಅವಕಾಶ ಇಲ್ಲ ಎಂದು 2014 ಸೆಪ್ಟಂಬರ್‌ನಲ್ಲಿ ಗವರ್ನರ್ ಆಗಿ ನೇಮರಾಗಿರುವ ಕಲ್ಯಾಣ್ ಸಿಂಗ್ ಹೇಳಿದ್ದಾರೆ.

ಆರ್ಥಿಕ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯದ ಜೊತೆಗೆ ಸಹಿಷ್ಣುತೆ ಪ್ರಜಾಪ್ರಭುತ್ವದ ಪ್ರಾಣತತ್ವ. ನನ್ನ ಚಿಂತನೆಗಳು ನಿಮಗೆ ಹೊಂದಿಕೆಯಾಗದು. ಆದರೆ, ನಾನು ನಿಮ್ಮ ಚಿಂತನೆಗಳಿಗೆ ಗೌರವ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ನಾವು ಇನ್ನೊಬ್ಬರ ಚಿಂತನೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಇರಬಹುದು. ಆದರೆ, ಅವರ ಚಿಂತನೆಗಳನ್ನು ಸಹಿಸುವ ಸಾಮರ್ಥ್ಯ ನಮಗಿರಬೇಕು. ಅವರ ಚಿಂತನೆಗಳಿಗೆ ವಿರುದ್ಧವಾಗಿ ನಮ್ಮ ಚಿಂತನೆಗಳನ್ನು ಹೇಳಬಹುದು. ಆದರೆ, ಅಲ್ಲಿ ಅಸಹಿಷ್ಣುತೆ ಇರಬಾರದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News