ಐಎಸ್‌ಬಿ ಮಾಜಿ ಸಹ ನಿರ್ದೇಶಕನ ವಿರುದ್ಧ ನಂಬಿಕೆ ದ್ರೋಹ ಪ್ರಕರಣ
Update: 2018-01-31 21:45 IST
ಚಂಡಿಗಡ,ಜ.31: ಮೊಹಾಲಿಯ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ (ಐಎಸ್‌ಬಿ)ನ ಬಿಜಿನೆಸ್ ಮ್ಯಾನೇಜರ್ ಮದನಜಿತ್ ಸಿಂಗ್ ರಾಂಧವಾ ಅವರ ದೂರಿನ ಮೇರೆಗೆ ಜಿಲ್ಲಾ ಪೊಲೀಸರು ಸಂಸ್ಥೆಯ ಮಾಜಿ ಸಹ ನಿರ್ದೇಶಕ ದೀಪಕ್ ಹೇಡಾವ್(37) ವಿರುದ್ಧ ನಂಬಿಕೆ ದ್ರೋಹ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮೂಲತಃ ತಮಿಳುನಾಡಿನ ಚೆನ್ನೈನವರಾಗಿದ್ದು, ಚಂಡಿಗಡ ನಿವಾಸಿಯಾಗಿದ್ದ ಹೇಡಾವ್ 2015,ಆ.31ರಂದು ಐಎಸ್‌ಬಿಯ ಮಾಸ್ಟರ್ ಪ್ಲಾನ್ ಪ್ರಾಜೆಕ್ಟ್ಸ್‌ವಿಭಾಗದ ಸಹ ನಿರ್ದೇಶಕರಾಗಿ ಕರ್ತವ್ಯಕ್ಕೆ ಸೇರಿದ್ದರು. 2016,ಮಾ.10ರಂದು ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಸಂಸ್ಥೆಯು ತನಗೆ ನೀಡಿದ್ದ ಕಾರನ್ನು ಅವರು 30 ದಿನಗಳಲ್ಲಿ ವಾಪಸ್ ಮಾಡಬೇಕಾಗಿತ್ತು. ಆದರೆ ಹಾಗೆ ಮಾಡದೇ ನಂಬಿಕೆ ದ್ರೋಹ ವನ್ನೆಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹೇಡಾವ್ ತಲೆಮರೆಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.