×
Ad

ಜನಾಂಗೀಯ ದ್ವೇಷದಿಂದ ಹತ್ಯೆಯಾದ ಭಾರತೀಯನ ಪತ್ನಿ ಟ್ರಂಪ್ ಕಾರ್ಯಕ್ರಮದಲ್ಲಿ

Update: 2018-01-31 22:42 IST

ವಾಶಿಂಗ್ಟನ್,ಜ.31: ಅಮೆರಿಕದಲ್ಲಿ ಕಳೆದ ವರ್ಷ ಜನಾಂಗೀಯ ದ್ವೇಷದಿಂದ ಹತ್ಯೆಯಾದ ಭಾರತೀಯ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲಾ ಪತ್ನಿ ಸುನನಾ ದುಮಾಲಾ ಅವರು ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಕಾಂಗ್ರೆಸ್‌ನಲ್ಲಿ ಸ್ಟೇಟ್ ಆಫ್ ಯೂನಿಯನ್ ಭಾಷಣ ಮಾಡಿದ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಟ್ರಂಪ್ ಅವರ ಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ 32 ವರ್ಷ ವಯಸ್ಸಿನ ಸುನನಾ ಅವರನ್ನು ಅಮೆರಿಕ ಕಾಂಗ್ರೆಸ್ ಸಂಸದ ಕೆವಿನ್ ಯೊಡೆರ್ ಆಹ್ವಾನಿಸಿದ್ದರು.

  ಕಳೆದ ವರ್ಷದ ಫೆಬ್ರವರಿಯಲ್ಲಿ ಅಮೆರಿಕದ ಒಲಾತೆ ನಗರದ ಬಾರ್ ಒಂದರಲ್ಲಿ ಕುಚಿಬೊಟ್ಲಾ ಅವರನ್ನು ಅಮೆರಿಕ ನೌಕಾಪಡೆಯ ನಿವೃತ್ತ ಯೋಧನೊಬ್ಬ ಗುಂಡು ಹಾರಿಸಿ ಹತ್ಯೆಗೈದಿದ್ದ. ಘಟನೆಯಲ್ಲಿ ಕುಚಿಬೊಟ್ಲಾ ಜೊತೆಗಿದ್ದ ಭಾರತೀಯ ಸಹದ್ಯೋಗಿ ಯೊಬ್ಬರುಕೂಡಾ ಗಾಯಗೊಂಡಿದ್ದರು. ಗುಂಡು ಹಾರಿಸಿದ ಸಂದರ್ಭದಲ್ಲಿ ದಾಳಿಕೋರನು ಕುಚಿಬೊಟ್ಲಾ ಅವರನ್ನುದ್ದೇಶಿಸಿ “ನನ್ನ ದೇಶದಿಂದ ಹೊರಹೋಗಿ” ಎಂದು ಅರಚುತ್ತಿದ್ದನೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News