ಕಸ್ಟಮ್ಸ್ ಸುಂಕ ಏರಿಕೆ : ದುಬಾರಿಯಾಗಲಿವೆ ಮೊಬೈಲ್ ಫೋನ್, ಟಿವಿ, ವೀಡಿಯೋ ಗೇಮ್

Update: 2018-02-01 10:50 GMT

ಹೊಸದಿಲ್ಲಿ,ಫೆ.1 :  ಸಾಮಾನ್ಯವಾಗಿ ಪ್ರತಿ ಬಜೆಟ್ ನಲ್ಲಿ ಕಸ್ಟಮ್ಸ್ ಸುಂಕ ಇಳಿಕೆ ಮಾಡಲಾಗುತ್ತಿದ್ದರೆ ಈ ಬಾರಿ ಆ ಪದ್ಧತಿಯಿಂದ ಹಿಂದೆ ಸರಿದು  ತಮ್ಮ  2018ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮೊಬೈಲ್ ಫೋನುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಈಗಿನ ಶೇ .15ರಿಂದ ಶೇ. 20ಕ್ಕೆ ಏರಿಸಿದ್ದಾರೆ. ಇದು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಉತ್ತೇಜಿಸಲು ಹಾಗೂ ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಟೆಲಿವಿಷನ್ ಸೆಟ್ಟುಗಳ ಕೆಲವೊಂದು ಬಿಡಿ ಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಈ ಹಿಂದೆ ಶೇ 7.5ರಿಂದ ಶೇ 10ರ ಶ್ರೇಣಿಯಲ್ಲಿದ್ದರೆ ಅದನ್ನೂ ಶೇ. 15ಕ್ಕೆ ಏರಿಸಲಾಗುವುದೆಂದು ಜೇಟ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಮೊಬೈಲ್ ಫೋನ್ ಮತ್ತು ಟಿವಿ ಖರೀದಿದಾರರು ಹೆಚ್ಚಿನ ಬೆಲೆ ತೆರಬೇಕಾದ ಸಂದರ್ಭ ಒದಗಿ ಬರಬಹುದೆಂದು ನಿರೀಕ್ಷಿಸಲಾಗಿದೆ. ವೀಡಿಯೋ ಗೇಮ್ ಕನ್ಸೋಲ್ ಗಳ ಮೇಲಿನ ಕಸ್ಟಮ್ಸ್ ಸುಂಕವನ್ನೂ  ಶೇ. 10ರಿಂದ ಶೇ. 20ಕ್ಕೇರಿಸಲಾಗಿದೆ.

ಜಿಎಸ್‍ಟಿ ಜಾರಿಯ ನಂತರ  ಒಂದು ಡಜನಿಗೂ ಅಧಿಕ ಪರೋಕ್ಷ ತೆರಿಗೆಗಳನ್ನು ವಿತ್ತ ಸಚಿವರು ಪರಿಷ್ಕರಿಸುವುದು ಅಸಾಧ್ಯವಾಗಿದೆ. ಆದರೆ ಕಸ್ಟಮ್ಸ್ ಸುಂಕ ಮಾತ್ರ ಜಿಎಸ್‍ಟಿಯ ವ್ಯಾಪ್ತಿಯಿಂದ ಹೊರಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News