ಮೋಹನ್‌ಲಾಲ್ ಚಿತ್ರದಲ್ಲಿ ಸುದೀಪ್?

Update: 2018-02-04 10:38 GMT

ಕಳೆದ ವರ್ಷ ಸಾಲುಸಾಲು ಹಿಟ್ ಚಿತ್ರಗಳನ್ನು ನೀಡಿದ್ದ ಮೋಹನ್‌ಲಾಲ್ 2018ರಲ್ಲೂ ಪ್ರೇಕ್ಷಕರಿಗೆ ಸಾಕಷ್ಟು ಸರ್‌ಪ್ರೈಸ್ ನೀಡಲಿದ್ದಾರೆ. ಒಂದೆರಡು ಬಾಲಿವುಡ್ ಚಿತ್ರಗಳಿಗೆ ಆ್ಯಕ್ಷನ್‌ಕಟ್ ಹೇಳಿದ್ದ ಅಜಯ್ ವರ್ಮಾ ನಿರ್ದೇಶನದ ಮಲಯಾಳಂ ಚಿತ್ರ ‘ನೀರಾಲಿ’ಯ ಚಿತ್ರೀಕರಣದಲ್ಲಿ ಲಾಲೇಟನ್ ಈಗ ಬ್ಯುಸಿಯಾಗಿದ್ದಾರೆ. ಪಾರ್ವತಿ ನಾಯರ್, ಸಾಯಿ ಕುಮಾರ್ ಹಾಗೂ ಸೂರಜ್ ವೆಂಜರಮೂಡು ಮುಖ್ಯಪಾತ್ರಗಳಲ್ಲಿರುವುದು ಈಗಾಗಲೇ ಅಧಿಕೃತವಾಗಿ ದೃಢಪಟ್ಟಿದೆ. ಈ ನಡುವೆ ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್, ಕಿಚ್ಚ ಸುದೀಪ್ ಕೂಡಾ ‘ನೀರಾಲಿ’ಯಲ್ಲಿ ನಟಿಸುತ್ತಿ ದ್ದಾರೆಂಬ ವದಂತಿಗಳು ಕಾಡ್ಗಿಚ್ಚಿನಂತೆ ಹರಿದಾಡುತ್ತಿದ್ದು, ಈ ಸಿನೆಮಾದ ಬಗ್ಗೆ ಚಿತ್ರರಸಿಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಆದಾಗ್ಯೂ, ನಿರ್ದೇಶಕರಾಗಲಿ, ಚಿತ್ರತಂಡವಾಗಲಿ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಆದರೆ ಆಂಗ್ಲ ದೈನಿಕವೊಂದು ವರದಿ ಮಾಡಿರುವ ಪ್ರಕಾರ, ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ಸುದೀಪ್‌ರನ್ನು ಕರೆತರುವ ಯೋಚನೆಯಿತ್ತಾದರೂ, ಡೇಟ್ಸ್ ಹೊಂದಿಕೆಯಾಗದ ಕಾರಣ ಅವರ ಬದಲಿಗೆ ಬಾಲಿವುಡ್‌ನ ಜನಪ್ರಿಯ ನಟರೊಬ್ಬರನ್ನು ಆಯ್ಕೆ ಮಾಡಲಾಗಿದೆಯಂತೆ. ಕಿಚ್ಚ ಅಭಿನಯದ ಟಾಲಿವುಡ್ ಚಿತ್ರ ‘ಇಗ’ ಕೇರಳದಲ್ಲೂ ಯಶಸ್ವಿಯಾಗಿ ಓಡಿತ್ತು. ಹೀಗಾಗಿ ಸುದೀಪ್ ಅವರ ಮಲಯಾಳಂ ಚಿತ್ರರಂಗ ಪ್ರವೇಶದ ಬಗ್ಗೆ ಅಪಾರ ನಿರೀಕ್ಷೆಗಳಿದ್ದವು.

 ಭರ್ಜರಿ ಆ್ಯಕ್ಷನ್ ಹಾಗೂ ಸಾಹಸ ಸನ್ನಿವೇಶಗಳಿಂದ ತುಂಬಿರುವ ನೀರಾಲಿಯಲ್ಲಿ ಮೋಹನ್‌ಲಾಲ್ ಅವರ ಹೊಸ ಗೆಟಪ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ‘ನೀರಾಲಿ’ಯ ಶೂಟಿಂಗ್ ಮುಂಬೈನಲ್ಲಿ ಭರದಿಂದ ಸಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News