×
Ad

ದೇವರ ವಿಗ್ರಹವನ್ನು ಅಲಂಕರಿಸಿದ ಅರ್ಚಕರ ಅಮಾನತು!

Update: 2018-02-05 21:45 IST

ನಾಗಪಟ್ಟಣಂ(ತ.ನಾ),ಫೆ.5: ಆಗಮ ಸಂಪ್ರದಾಯಗಳಿಗೆ ವಿರುದ್ಧವಾಗಿ ದೇವಿಯ ವಿಗ್ರಹವನ್ನು ಚೂಡಿದಾರ ಮತ್ತು ಗಂಧದಿಂದ ಅಲಂಕರಿಸಿದ್ದ ಜಿಲ್ಲೆಯ ಮೈಲಾಡುದುರೈನ ಮಯೂರನಾಥ ದೇವಸ್ಥಾನದ ಇಬ್ಬರು ಅರ್ಚಕರನ್ನು ಸೋಮವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಜ.26ರಂದು ದೇವಿಗೆ ಗುಜರಾತಿ ಶೈಲಿಯಲ್ಲಿ ಅಲಂಕಾರ ಮಾಡಿದ್ದ ಅರ್ಚಕರು ಅದಕ್ಕೆ ಸಿಕ್ಕಿದ್ದ ಧನಾತ್ಮಕ ಪ್ರತಿಕ್ರಿಯೆಯಿಂದ ಉತ್ತೇಜಿತಗೊಂಡು ತಮಿಳು ತೈ(ಮಕರ)ಮಾಸದ ಶುಭದಿನವಾಗಿದ್ದ ಫೆ.2ರಂದು ವಿಗ್ರಹಕ್ಕೆ ಚಂದನದ ಅಲಂಕಾರದ ಜೊತೆಗೆ ಚೂಡಿದಾರವನ್ನೂ ತೊಡಿಸಿದ್ದರು. ಆದರೆ ಇದು ಅವರಿಗೆ ತಿರುಗೇಟಾಗಿ ಪರಿಣಮಿಸಿದೆ. ಅಲಂಕೃತ ವಿಗ್ರಹದ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಹಲವಾರು ಭಕ್ತರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಗ್ರಹಕ್ಕೆ ಮಾಡಿದ್ದ ಅಲಂಕಾರ ಅವಮಾನಕಾರಿಯಾಗಿರದಿದ್ದರೂ ಅದು ದೇವಸ್ಥಾನದ ನಿಯಮಗಳಿಗೆ ವಿರುದ್ಧವಾಗಿತ್ತು ಎಂದು ದೇವಳದ ಕೆಲವು ಅಧಿಕಾರಿಗಳು ಮತ್ತು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ನಿಯಮಗಳಂತೆ ಕೇವಲ ಸೀರೆಯಿಂದ ಮಾತ್ರ ದೇವಿಯ ವಿಗ್ರಹವನ್ನು ಅಲಂಕರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News