ಭಾರತ ‘ದುಸ್ಸಾಹಸ’ಕ್ಕಿಳಿದರೆ ಪ್ರತಿಕ್ರಿಯೆ ಖಚಿತ: ಪಾಕ್

Update: 2018-02-06 16:25 GMT

ಇಸ್ಲಾಮಾಬಾದ್, ಫೆ. 6: ಭಾರತಕ್ಕೆ ಎಚ್ಚರಿಕೆ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖುರ್ರಮ್ ದಸ್ತಗಿರ್, ನೀವು ‘ದುಸ್ಸಾಹಸಕ್ಕಿಳಿದರೆ’ ‘ಪ್ರತಿಕ್ರಿಯೆ’ ಖಚಿತ ಎಂದು ಹೇಳಿದ್ದಾರೆ.

ಇಲ್ಲಿನ ಅಧ್ಯಕ್ಷೀಯ ನಿವಾಸದಲ್ಲಿ ಅಧ್ಯಕ್ಷ ಮಮ್ನೂನ್ ಹುಸೈನ್ ಸೋಮವಾರ ಏರ್ಪಡಿಸಿದ ‘ಕಾಶ್ಮೀರ ಸಾಲಿಡಾರಿಟಿ ದಿನ’ದಲ್ಲಿ ನೆರೆದವರನ್ನು ಉದ್ದೇಶಿಸಿದ ಮಾತನಾಡಿದ ಅವರು ಈ ಎಚ್ಚರಿಕೆ ನೀಡಿದ್ದಾರೆ.

‘‘ಅವರು (ಭಾರತ) (ಪ್ರಚೋದನೆಯಿಲ್ಲದೆ) ದುಸ್ಸಾಹಸ ಮಾಡುವ ಹಕ್ಕು ಹೊಂದಿರಬಹುದು. ಆದರೆ, ಇದಕ್ಕೆ ಯಾವ ಮಟ್ಟದಲ್ಲಿ ಹಾಗೂ ಯಾವ ಪ್ರಮಾಣದಲ್ಲಿ ಪ್ರತಿಕ್ರಿಯಿಸಬೇಕು ಎನ್ನುವ ಹಕ್ಕನ್ನು ನಾವು ಕಾದಿರಿಸಿದ್ದೇವೆ’’ ಎಂದು ದಸ್ತಗಿರ್ ಹೇಳಿರುವುದಾಗಿ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

2003ರಲ್ಲಿ ಭಾರತದೊಂದಿಗೆ ಸಹಿ ಹಾಕಲಾದ ಯುದ್ಧವಿರಾಮಕ್ಕೆ ಪಾಕಿಸ್ತಾನ ಬದ್ಧವಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರಾದರೂ, ಯುದ್ಧದ ಸಂದರ್ಭದಲ್ಲಿ ಅದನ್ನೊಂದು ದೌರ್ಬಲ್ಯವನ್ನಾಗಿ ಪರಿಗಣಿಸಬಾರದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News