ಬಾಲಿವುಡ್ ನಟ ಜೀತೇಂದ್ರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲು

Update: 2018-02-07 13:35 GMT

ಹೊಸದಿಲ್ಲಿ, ಫೆ.7: ಹಿರಿಯ ಬಾಲಿವುಡ್ ನಟ ಜೀತೇಂದ್ರ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರ ಸಂಬಂಧಿಯೊಬ್ಬರು ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಧೈರ್ಯ ತೋರಿ, ಮಾತನಾಡಲು ತನಗೇ ವರ್ಷಗಳೇ ಬೇಕಾಯಿತು. ತನಗೆ 18 ವರ್ಷವಿದ್ದಾಗ 28 ವರ್ಷದವರಾಗಿದ್ದ ಜಿತೇಂದ್ರ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕುಟುಂಬಸ್ಥರು, ಸಂಬಂಧಿಕರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಈ ಬಗ್ಗೆ ಪ್ರತಿಭಟಿಸಲು ಸಾಧ್ಯವಾಗದ ಹಲವರು ‘ಮಿ ಟೂ’ ಆಂದೋಲನದ ನಂತರ ತಾವು ಅನುಭವಿಸಿದ ಹಿಂಸೆಯನ್ನು ಬಹಿರಂಗಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಜೀತೇಂದ್ರ ಲೈಂಗಿಕ ಕಿರುಕುಳ ನೀಡಿದ ವಿಚಾರ ತಿಳಿದ ನಂತರ ತನ್ನ ಪೋಷಕರು ಆಘಾತಕ್ಕೊಳಗಾಗಿದ್ದರು. ಅವರ ನಿಧನದ ನಂತರ ತಾನು ಈ ಬಗ್ಗೆ ದೂರು ನೀಡಲು ನಿರ್ಧರಿಸಿದೆ ಎಂದು ಆಕೆ ಹೇಳಿದ್ದಾರೆ.

ಚಿತ್ರದ ಚಿತ್ರೀಕರಣವೊಂದಕ್ಕೆ ತಂದೆಯ ಒಪ್ಪಿಗೆಯೊಂದಿಗೆ ಆಕೆಯನ್ನು ಕರೆದೊಯ್ದಿದ್ದ ಜಿತೇಂದ್ರ ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News