ಸಾರಾ ತೆಂಡೂಲ್ಕರ್ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ ತೆರೆದ ಟೆಕ್ಕಿಯ ಬಂಧನ
Update: 2018-02-08 16:53 IST
ಮುಂಬೈ, ಫೆ. 8: ಸಚಿನ್ ತೆಂಡೂಲ್ಕರ್‍ರ ಪುತ್ರಿ ಸಾರಾ ತೆಂಡುಲ್ಕರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿದ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರನ್ನು ಬಂಧಿಸಲಾಗಿದೆ. ಮುಂಬೈಯ ನಿತಿನ್ ಸಿದೊಧಿ ಎಂಬಾತನನ್ನು ಅಂಧೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರಾರ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದು ಎನ್‍ಸಿಪಿ ನಾಯಕ ಶರದ್ ಪವಾರ್ ವಿರುದ್ಧ ಮಾನಹಾನಿಕರ ಟ್ವೀಟ್‍ಗಳನ್ನು ಮಾಡಲಾಗಿತ್ತು. ತನ್ನ ಮಕ್ಕಳಾದ ಸಾರಾಗಾಗಲಿ, ಅರ್ಜುನ್‍ಗಾಗಲಿ ಟ್ವಿಟರ್ ಖಾತೆ ಇಲ್ಲ. ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯಾರೋ ದುರುಪಯೋಗ ಪಡಿಸುತ್ತಿದ್ದಾರೆ ಎಂದು ಸಚಿನ್ ಹೇಳಿಕೆ ನೀಡಿದ್ದರು.
"ಎಲ್ಲರಿಗೂ ಗೊತ್ತಿದೆ. ಶರದ್ ಪವಾರ್ ಮತ್ತು ಎನ್‍ಸಿಪಿ ಮಹಾರಾಷ್ಟ್ರವನ್ನು ಕೊಳ್ಳೆಹೊಡೆದದ್ದು. ಆದರೆ ಕೇಂದ್ರದಲ್ಲಿಯೂ ಇದನ್ನೇ ಮಾಡಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿಲ್ಲ ಎಂದು ಈ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು. ಸಾರಾರ ಚಿತ್ರಗಳನ್ನು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಲಾಗಿತ್ತು.