ಧ್ವನಿವರ್ಧಕಗಳ ಶಕ್ತಿಯನ್ನು ವ್ಯಾಟ್‌ಗಳಲ್ಲಿ ಏಕೆ ಹೇಳಲಾಗುತ್ತದೆ?

Update: 2018-02-09 08:45 GMT

ಮನುಷ್ಯರು, ಪ್ರಾಣಿಗಳು ಮತ್ತು ವಸ್ತುಗಳು ಹೊರಡಿಸುವ ಶಬ್ದಗಳನ್ನು ಡೆಸಿಬಲ್‌ಗಳಲ್ಲಿ ಅಳೆಯಲಾಗುತ್ತದೆ. ಆದರೆ ಧ್ವನಿವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣವನ್ನು ವ್ಯಾಟ್‌ಗಳಲ್ಲಿ ಹೇಳಲಾಗುತ್ತದೆ. ಏಕೆ ಎಂಬ ಕುತೂಹಲವೇ?

 ಇತರ ಶಬ್ದಗಳಿಗೂ ಧ್ವನಿವರ್ಧಕಗಳ ಶಬ್ದಕ್ಕೂ ಇರುವ ವ್ಯತ್ಯಾಸವೆಂದರೆ ಅದು ವಿದ್ಯುತ್ ಸಂಕೇತದ ಮೂಲಕ ಹೊರಹೊಮ್ಮುತ್ತದೆ. ಈ ವಿದ್ಯುತ್ ಸಂಕೇತವು, ಇತರ ವಿದ್ಯುತ್ ಉಪಕರಣಗಳಂತೆ ಬಳಕೆಯಾದ ಶಕ್ತಿಯನ್ನು ಅಥವಾ ತನ್ನ ಮೂಲಕ ಹರಿಯುತ್ತಿರುವ ವಿದ್ಯುತ್‌ನಿಂದ ಆಗಿರುವ ಕಾರ್ಯವನ್ನು ಪ್ರತಿನಿಧಿಸುತ್ತದೆ. ಈ ಶಕ್ತಿಯು ಕರೆಂಟ್ ಮತ್ತು ವೋಲ್ಟೇಜ್ ಮತ್ತು ಕರೆಂಟ್ ಹಾಗೂ ವೋಲ್ಟೇಜ್‌ಗಳ ನಡುವಿನ ಫೇಸ್ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ. ಒಂದು ವ್ಯಾಟ್ ಎಂದರೆ ಪ್ರತಿ ಸೆಕೆಂಡ್‌ಗೆ ಒಂದು ಜೌಲ್‌ಗೆ ಶಕ್ತಿಯ ಅಥವಾ ಆದ ಕಾರ್ಯದ ಪ್ರಮಾಣವಾಗಿರುತ್ತದೆ. ಈ ಅಳತೆಯು ವಾಣಿಜ್ಯ ಉದ್ದೇಶಗಳಿಗಾಗಿ ವಿದ್ಯುತ್ ಔಟ್‌ಪುಟ್ ಅಳೆಯುವುದನ್ನು ಸುಲಭವಾಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News