×
Ad

ಮುದ್ರಣಾಲಯ-ಆರ್‌ಬಿಐ ನಡುವೆ ನಾಪತ್ತೆಯಾದ ಭಾರೀ ಪ್ರಮಾಣದ ನೋಟುಗಳು!

Update: 2018-02-11 21:22 IST

ಮುಂಬೈ, ಫೆ. 11: ಮಾಹಿತಿ ಹಕ್ಕು ಕಾರ್ಯಕರ್ತ ಮನೋರಂಜನ್ ರಾಯ್ ಅವರ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಬಾಂಬೆ ಉಚ್ಚ ನ್ಯಾಯಾಲಯ ಫೆಬ್ರವರಿ 12ರಂದು ನಡೆಸಲಿದೆ.

  ದೊಡ್ಡ ಪ್ರಮಾಣದಲ್ಲಿ ‘ಕಾಣೆಯಾದ ಹಾಗೂ ಹೆಚ್ಚುವರಿ’ಯಾದ ಭಾರತೀಯ ನೋಟುಗಳಿಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಇತರ ಸಂಸ್ಥೆಗಳಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸ್ವೀಕರಿಸಲಾದ ಆಧಾರದಲ್ಲಿ 2015ರಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿತ್ತು.

ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ನಾಸಿಕ್, ದೇವಾಸ್ ಹಾಗೂ ಮೈಸೂರಿನ ಬಿಗಿಭದ್ರತೆಯ ಮುದ್ರಣಾಲಯದಿಂದ 2000ದಿಂದ 2011ರ ವರೆಗೆ ನಿರ್ದಿಷ್ಟ ಸಂಖ್ಯೆಯ ನೋಟುಗಳನ್ನು ಸ್ವೀಕರಿಸಲಾಗಿತ್ತು ಎಂದು ರಾವ್ ಹೇಳಿದ್ದಾರೆ.

ಮುದ್ರಣಾಲಯ ನೀಡಿದ ಅಂಕಿ ಅಂಶಗಳ ಪ್ರಕಾರ 500 ಮುಖಬೆಲೆಯ 19,45,40,00,000 ನೋಟುಗಳನ್ನು ಆರ್‌ಬಿಐಗೆ ನೀಡಲಾಗಿತ್ತು. ಆದರೆ, 18,98,46,84,000 ನೋಟುಗಳನ್ನು ಸ್ವೀಕರಿಸಲಾಗಿತ್ತು ಎಂದು ಆರ್‌ಬಿಐ ಹೇಳಿದೆ. ಇಲ್ಲಿ 49,93,16,000 ನೋಟುಗಳು ಅಥವಾ 23,465 ಕೋಟಿ ರೂಪಾಯಿ ನೋಟುಗಳು ನಾಪತ್ತೆಯಾಗಿವೆ.

1000 ಮುಖಬೆಲೆಯ 4,44,13,00,000 ನೋಟುಗಳನ್ನು ಆರ್‌ಬಿಐಗೆ ಕಳುಹಿಸಲಾಗಿತ್ತು ಎಂದು ಮುದ್ರಣಾಲಯ ಹೇಳಿದೆ. ಆದರೆ, 4,45,30,00,000 ನೋಟುಗಳನ್ನು ಸ್ವೀಕರಿಸಲಾಗಿತ್ತು ಎಂದು ಆರ್‌ಬಿಐ ಹೇಳಿದೆ. ಅಂದರೆ 1,17,00,000 ನೋಟುಗಳು ಅಥವಾ 1,170 ಕೋಟಿ ರೂ. ಹೆಚ್ಚುವರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News