×
Ad

ಪ್ರಸಿದ್ಧ ಸಿಹಿತಿಂಡಿ ‘ರಸಗುಲ್ಲಾ’ ಆವಿಷ್ಕರಿಸಿದ್ದು ಯಾರೆಂದು ಬಲ್ಲಿರಾ?

Update: 2018-02-11 21:39 IST

ಕೋಲ್ತತಾ, ಫೆ. 11: ಹತ್ತೊಂಬತ್ತನೇ ಶತಮಾನದಲ್ಲಿ ರಸಗುಲ್ಲಾ ಆವಿಷ್ಕರಿಸಿದ ಸಿಹಿ ತಿಂಡಿ ತಯಾರಕ ನೋಬಿನ್ ಚಂದ್ರ ದಾಸ್ ಕುರಿತ ವಿಶೇಷ ಲಕೋಟೆಯೊಂದನ್ನು ಹೊರತರಲು ಅಂಚೆ ಇಲಾಖೆ ನಿರ್ಧರಿಸಿದೆ ಎಂದು ಅಂಚೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ರಸಗುಲ್ಲಾ ಆವಿಷ್ಕಾರಕ್ಕೆ ಇದು 150ನೇ ವರ್ಷ. ಪಶ್ಚಿಮಬಂಗಾಳ ಸರಕಾರ ಕಳೆದ ವರ್ಷ ನವೆಂಬರ್‌ನಲ್ಲಿ ರಸಗುಲ್ಲಕ್ಕೆ ಭೌಗೋಳಿಕ ಗುರುತು ಪಟ್ಟಿ (ಜಿಐ) ನೀಡಿತ್ತು. ಈ ನಿರ್ಧಾರದ ಬಳಿಕ ಅಂಚೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.

‘‘ನೋಬಿನ್ ಚಂದ್ರ ದಾಸ್ ಕುರಿತ ವಿಶೇಷ ಲಕೋಟೆಯನ್ನು ನಾವು ಹೊರತರಲು ಯೋಜಿಸಿದ್ದೇವೆ’’ ಎಂದು ಪಶ್ಚಿಮಬಂಗಾಳ ಸರ್ಕಲ್‌ನ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಆರುಂಧತಿ ಘೋಶ್ ತಿಳಿಸಿದ್ದಾರೆ.

 ಈ ವಿಷಯವನ್ನು ದೃಢೀಕರಿಸಲು ಜಿಐಗೆ ಅಂಚೆ ಇಲಾಖೆ ಪತ್ರ ಬರೆದಿದೆ. ಅನುಮತಿ ದೊರಕಿದ ಬಳಿಕ ವಿಶೇಷ ಲಕೋಟೆಯ ವಿನ್ಯಾಸವನ್ನು ಬಿಡುಗಡೆಗೊಳಿಸ ಲಾಗುವುದು ಎಂದು ಘೋಶ್ ತಿಳಿಸಿದ್ದಾರೆ.

ನೋಬಿನ್ ಚಂದ್ರ ದಾಸ್ ಅವರ ಜೀವನಚರಿತ್ರೆ ಕೂಡ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ನೋಬಿನ್ ಚಂದ್ರದಾಸ್ ಅವರ ಮರಿ ಮೊಮ್ಮಗ ಹಾಗೂ ಸಿಹಿತಿಂಡಿ ಉತ್ಪಾದಕ ಸಂಸ್ಥೆ ಕೆ.ಸಿ. ದಾಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಧೀಮನ್ ದಾಸ್ ಈ ಅಂಚೆ ಇಲಾಖೆಯ ಈ ನಡೆಯನ್ನು ಸ್ವಾಗತಿಸಿದ್ದಾರೆ.

‘‘ಇದು ನನಗೆ, ನನ್ನ ಕುಟುಂಬಕ್ಕೆ ಹಾಗೂ ಸಹೋದ್ಯೋಗಿಗಳಿಗೆ ನೀಡುವ ಅತ್ಯುಚ್ಚ ಗೌರವ. ಇಂತಹ ಅದ್ಬುತ ಸಿಹಿ ತಿಂಡಿಯನ್ನು ಆವಿಷ್ಕರಿಸಿದ ವ್ಯಕ್ತಿಯ ಕುರಿತು ವಿಶೇಷ ಲಕೋಟೆ ರೂಪಿಸುತ್ತಿರುವುದು ಇದೇ ಮೊದಲು’’ ಎಂದು ಧೀಮನ್ ದಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News