ರೈಲ್ವೆ ಟ್ರಾಕ್‌ಮೆನ್ ರಕ್ಷಣೆಗೆ ‘ರಕ್ಷಕ್’

Update: 2018-02-11 16:31 GMT

ರಾಯ್‌ಪುರ, ಫೆ. 11: ಕಾರ್ಯ ನಿರ್ವಹಿಸುತ್ತಿರುವ ಸಂದರ್ಭ ಟ್ರಾಕ್ ಮೆನ್ ರೈಲಿಗೆ ಸಿಲುಕಿ ಸಾವನ್ನಪ್ಪುತ್ತಿರುವ ಪ್ರಕರಣಗಳ ಬಗ್ಗೆ ಕಳವಳಗೊಂಡಿರುವ ರೈಲ್ವೆ ಮಂಡಳಿ, ಈಗ ಟ್ರಾಕ್‌ಮೆನ್‌ಗೆ ಬೂಟ್, ಕೈಗವಸು, ರೈನ್‌ಕೋಟ್, ಚಾಕೆಟ್, ಟೂಲ್ ಕಿಟ್‌ನೊಂದಿಗೆ ವೈಯುಕ್ತಿಕ ಸುರಕ್ಷಾ ಸಾಧನ ನೀಡಲು ನಿರ್ಧರಿಸಿದೆ. ಎಲ್ಲ ಟ್ರಾಕ್‌ಮನ್‌ಗೆ ಅತಿ ಜನಸಾಂದ್ರತೆಯ ಪ್ರದೇಶಗಳಲ್ಲಿ ಬಳಸಲು ಕೈಯಲ್ಲಿ ಹಿಡಿದುಕೊಳ್ಳುವ ವಾಕಿ-ಟಾಕಿ ‘ರಕ್ಷಕ್’ ನೀಡಲು ಮಂಡಳಿ ನಿರ್ಧರಿಸಿದೆ.

ಧ್ವನಿ ಹಾಗೂ ಕಂಪನದೊಂದಿಗೆ ಲೆಡ್ ಬೆಳಕಿನ ಸೂಚನೆ ನೀಡುವ ಮೂಲಕ ಈ ಸಾಧನ ರೈಲು ಬರುತ್ತಿರುವ ಬಗ್ಗೆ ಮಾಹಿತಿ ನೀಡಲಿದೆ. ಇದು ಟ್ರಾಕ್ ಮೆನ್‌ಗಳು ಹಳಿಯಿಂದ ಸರಿದು ನಿಲ್ಲಲು ನೆರವಾಗುತ್ತದೆ.

ಹಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಟ್ರಾಕ್‌ಮೆನ್ ರೈಲಿನಡಿ ಸಿಲುಕಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಕ್ಷಕ್ ಮಾದರಿಯ ರಕ್ಷಣಾ ವ್ಯವಸ್ಥೆಯನ್ನು ತ್ವರಿತವಾಗಿ ಅಳವಡಿಸುವುದು ಅತ್ಯಗತ್ಯ ಎಂದು ರೈಲ್ವೆ ಮಂಡಳಿ ಹೇಳಿದೆ.

    ಆದಾಗ್ಯೂ, ಈ ವ್ಯವಸ್ಥೆ ಈಗ ಶೈಶವಾವಸ್ಥೆಯಲ್ಲಿದೆ. ಪ್ರಸ್ತುತ ಈ ವ್ಯವಸ್ಥೆಯನ್ನು ಸಂಪೂರ್ಣ ರೈಲು ಜಾಲಕ್ಕೆ ಅಳವಡಿಸುವುದು ಸುಲಭ ಸಾಧ್ಯವಲ್ಲ. ಟ್ರಾಕ್ ಮೆನ್ ದೊಡ್ಡ ಸಂಖ್ಯೆಯಲ್ಲಿ ಅಪಘಾತಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯಧಿಕ ಜನಸಾಂದ್ರತೆ ಇರುವ ಜಾಲದಲ್ಲಿ ‘ರಕ್ಷಕ್’ ಮಾದರಿಯ ಸುರಕ್ಷಾ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಮಂಡಳಿ ಎಲ್ಲ ರೈಲ್ವೆ ವಲಯಗಳಿಗೆ ರವಾನಿಸಿದ ಪತ್ರದಲ್ಲಿ ರೈಲ್ವೆ ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News