ಕೈಲೀ ಜೆನ್ನೆರ್, ಕ್ರಿಸ್ಟಿಯಾನೋ ರೊನಾಲ್ಡೊ ನಂತರದ ಸ್ಥಾನದಲ್ಲಿ ಪ್ರಿಯಾ ಪ್ರಕಾಶ್

Update: 2018-02-12 17:18 GMT

ತಿರುವನಂತಪುರಂ, ಫೆ.12: ತಮ್ಮ ಚೊಚ್ಚಲ ಮಲಯಾಳಂ ಚಿತ್ರ 'ಒರು ಅಡಾರ್ ಲವ್' ಮೂಲಕ ಭಾರೀ ಪ್ರಸಿದ್ಧಿ ಗಳಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಈಕೆ ನಟಿಸಿದ್ದ ಹಾಡಿನ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪ್ರಿಯಾ ಪ್ರಕಾಶ್ ವಾರಿಯರ್ ಎಂಬ ಹೆಸರು ಟಾಪ್ ಟ್ರೆಂಡಿಂಗ್ ನಲ್ಲಿ ಕಾಣಿಸಿತ್ತು. 

ಒಂದೇ ದಿನದಲ್ಲಿ  ಇನ್‍ಸ್ಟಾಗ್ರಾಂನಲ್ಲಿ 6,06,000ಗೂ ಅಧಿಕ ಫಾಲೋವರ್ಸ್ ಅನ್ನು ಪಡೆದ ವಿಶ್ವದ ಮೂರನೇ ಸೆಲೆಬ್ರಿಟಿಯಾಗಿ ಹೊಸ ದಾಖಲೆ ಬರೆದಿದ್ದಾರೆ ಪ್ರಿಯಾ ಪ್ರಕಾಶ್. ಈ ನಿಟ್ಟಿನಲ್ಲಿ ಅಮೆರಿಕಾದ ಮಾಡೆಲ್ ಹಾಗೂ ಟಿವಿ ತಾರೆ ಕೈಲೀ ಜೆನ್ನೆರ್ ಹಾಗೂ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರ ನಂತರದ ಸ್ಥಾನದಲ್ಲಿದ್ದಾರೆ. ಕೈಲೀ ಜೆನ್ನೆರ್ ಗೆ 808,000 ಫಾಲೋವರ್ಸ್ ಇದ್ದರೆ ಕ್ರಿಸ್ಟಿಯಾನೋ ರೊನಾಲ್ಡೋಗೆ 650000 ಫಾಲೋವರ್ಸ್ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News