×
Ad

'ಒರು ಅಡಾರ್ ಲವ್' ಚಿತ್ರದ ನಟಿ ಪ್ರಿಯಾ ವಿರುದ್ಧ ದೂರು !

Update: 2018-02-14 18:50 IST

ಹೈದರಾಬಾದ್ , ಫೆ.14:  ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು  ‘ಒರು ಅಡಾರ್ ಲವ್’  ಚಿತ್ರದ “ಮಾಣಿಕ್ಯ ಮಲರಾಯ ಪೂವಿ” ಹಾಡು ದೇಶಾದ್ಯಂತ  ಭಾರೀ ಸದ್ದು ಮಾಡಿರುವ ಬೆನ್ನಲ್ಲೇ ಅವರ ನಟನೆಯ ಬಗ್ಗೆ ಅಪಸ್ವರ ಕೇಳಿ ಬಂದಿದೆ.

'ಒರು ಅಡಾರ್ ಲವ್' ಚಿತ್ರದ 'ಮಾಣಿಕ್ಯ ಮಲರಾಯ ಪೂವಿ’  ಎಂಬ ಹಾಡಿನಲ್ಲಿ  ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಆಕ್ಷೇಪರ್ಹಾ ರೀತಿಯಲ್ಲಿ  ವರ್ತಿಸಿದ್ದಾರೆ. ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಹೈದರಾಬಾದ್ ನ ಫಾರೂಕ್ ನಗರದ ಎಂಜಿನಿಯರಿಂಗ್ ವಿದ್ಯಾರ್ಥಿ ಮುಹಮ್ಮದ್ ಅಬ್ದುಲ್ಲ ಸೇರಿದಂತೆ 57 ಮಂದಿ   ಫಲಕ್ ನೂಮಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ನಟಿ ಪ್ರಿಯಾ ಪ್ರಕಾಶ್ ವಾರಿಯರ್  ಅವರ ಜೊತೆಗೆ  ಚಿತ್ರದ ನಿರ್ದೇಶಕ ಉಮರ್ ಲೂಲೂ ವಿರುದ್ಧವೂ ದೂರು ನೀಡಲಾಗಿದೆ. ಲಿಕಿತ ದೂರು ಸ್ವೀಕರಿಸಿರುವ ಪೊಲೀಸರು ಇನ್ನೂ ಯಾರ ಮೇಲೂ ಎಫ್ ಐಆರ್ ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.

‘ಒರು ಅಡಾರ್ ಲವ್’  ಚಿತ್ರದ ಹಾಡು  ಸಾಮಾಜಿಕ ಜಾಲಾ ತಾಣಗಳಲ್ಲಿ  ಸಖತ್ ವೈರಲ್ ಆಗಿದ್ದು ಹಾಡಿನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಗಮನ ಸೆಳೆದಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.

‘ಮಾಣಿಕ್ಯ ಮಲರಾಯ ಪೂವಿ’ ಹಾಡನ್ನು ವಿನೀತ್ ಶ್ರೀನಿವಾಸನ್ ಹಾಡಿದ್ದು ಶಾನ್ ರಹ್ಮಾನ್ ಸಂಯೋಜಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News