ನೀರವ್ ಮೋದಿ ಪಾಸ್‌ಪೋರ್ಟ್ ರದ್ದು

Update: 2018-02-16 14:56 GMT

ಹೊಸದಿಲ್ಲಿ, ಫೆ. 15: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ವಂಚನೆ ಹಗರಣದ ಕುರಿತು ತನಿಖೆ ಮುಂದುವರಿಯುತ್ತಿರುವಂತೆ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರ ಪಾಸ್‌ಪೋರ್ಟ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ನಾಲ್ಕು ವಾರಗಳಿಗೆ ರದ್ದುಗೊಳಿಸಿದೆ.

ನೀರವ್ ಮೋದಿ ಎಲ್ಲಿದ್ದಾರೆ ಎಂದು ತಿಳಿದಿಲ್ಲ. ಪಾಸ್‌ಪೋರ್ಟ್ ಅನ್ನು ಯಾಕೆ ರದ್ದುಗೊಳಿಸಬಾರದು ಎಂಬ ಬಗ್ಗೆ ಉತ್ತರಿಸಲು ಅವರಿಗೆ ಒಂದು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

  ‘‘ನಿಗದಿತ ಸಮಯದಲ್ಲಿ ಅವರು ಉತ್ತರಿಸಲು ವಿಫಲವಾದರೆ, ಅವರ ಪ್ರತಿಕ್ರಿಯೆ ಇಲ್ಲ ಎಂದು ಭಾವಿಸಲಾಗುವುದು. ವಿದೇಶಾಂಗ ವ್ಯವಹಾರ ಸಚಿವಾಲಯ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಯಲ್ಲಿ ಮುಂದುವರಿಯಲಿದೆ’’ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

  ಜಾರಿ ನಿರ್ದೇಶನಾಲಯದ ಸಲಹೆ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಮಂಜೂರು ಮಾಡುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರ ಪಾಸ್‌ಪೋರ್ಟ್‌ನ್ನು ತಕ್ಷಣ ಜಾರಿಗೆ ಬರುವಂತೆ ನಾಲ್ಕು ವಾರಗಳ ಕಾಲ ರದ್ದುಗೊಳಿಸಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

‘‘ಅವರು ನಮ್ಮ ಯಾವುದೇ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇಲ್ಲ. ಅವರಿರುವ ಸ್ಥಳ ನಮಗೆ ತಿಳಿದಿಲ್ಲ.’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News