ಗೀತಾಂಜಲಿ ಗ್ರೂಪ್ ನಿಂದ ಪಿಎನ್ ಬಿಗೆ 4,886 ಕೋಟಿ ರೂ. ವಂಚನೆ: ಆರೋಪ

Update: 2018-02-16 16:36 GMT

ಹೊಸದಿಲ್ಲಿ, ಫೆ.16: ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ದೂರಿನ ಹಿನ್ನೆಲೆಯಲ್ಲಿ ಸಿಬಿಐ ನೀರವ್ ಮೋದಿಯ ಮಾವ ಮೆಹುಲ್ ಚೋಕ್ಸಿಯ ಗೀತಾಂಜಲಿ ಗ್ರೂಪ್ ವಿರುದ್ಧ ಎಫ್ ಐಆರ್ ನ್ನು ದಾಖಲಿಸಿದ್ದು, ಇವರನ್ನು ಪತ್ತೆಹಚ್ಚಲು ಇಂಟರ್ ಪೋಲ್ ನೆರವು ಕೋರಿದೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೀತಾಂಜಲಿ ಗ್ರೂಪ್ 4,886 ಕೋಟಿ ರೂ,ಗಳನ್ನು ವಂಚಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಇಂದು ಮುಂಬೈ, ಪುಣೆ, ಸೂರತ್, ಜೈಪುರ, ಹೈದರಾಬಾದ್ ಹಾಗು ಕೊಯಮತ್ತೂರು ಸೇರಿ ಗೀತಾಂಜಲಿ ಗ್ರೂಪ್ ಗೆ ಸೇರಿದ 20 ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಈ ದೂರಿನ ಹಿನ್ನೆಲೆಯಲ್ಲಿ ಚೋಕ್ಸಿ ಹಾಗು ಇತರರನ್ನು ಪತ್ತೆಹಚ್ಚುವಂತೆ ಸಿಬಿಐ ನೆರವನ್ನೂ ಕೋರಿದೆ. ಶೀಘ್ರ ನೀರವ್ ಮೋದಿ ಹಾಗು ಆತನ ಕುಟುಂಬಸ್ಥರನ್ನು ಪತ್ತೆಹಚ್ಚುವ ನಂಬಿಕೆಯಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News