ಎಪ್ರಿಲ್‌ನಲ್ಲಿ ಚಂದ್ರ ಯಾನ

Update: 2018-02-16 16:46 GMT

ಹೊಸದಿಲ್ಲಿ, ಫೆ. 16: ಇಸ್ರೋದ ನೇತೃತ್ವದಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ರೋವರ್ ಇಳಿಸುವ ಮೊದಲ ಚಂದ್ರಯಾನ ಯೋಜನೆ ಚಂದ್ರಯಾನ-2ವನ್ನು ಎಪ್ರಿಲ್‌ನಲ್ಲಿ ಆರಂಭಿಸಲಾಗುವುದು ಎಂದು ಬಾಹ್ಯಾಕಾಶ ಇಲಾಖೆಯ ಉಸ್ತುವಾರಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

   ಭಾರತದ ಎರಡನೇ ಚಂದ್ರ ಯಾನದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಇಳಿಸಲಾಗುವುದು. ಇದರ ವೆಚ್ಚ 8 ಸಾವಿರ ಕೋ. ರೂ. ಎಂದು ಇಸ್ರೋಗೆ ನಿಯೋಜಿತರಾಗಿರುವ ನೂತನ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

ಎಪ್ರಿಲ್‌ನಲ್ಲಿ ಭಾರತ ಚಂದ್ರ ಯಾನ ನಡೆಸಲಿದೆ. ಇಸ್ರೋ ಚಂದ್ರನಲ್ಲಿ ನೀರು ಗುರುತಿಸಿದ 1ನೇ ಚಂದ್ರಯಾನದ ಭಾಗವಾಗಿ ಈ ಚಂದ್ರಯಾನ 2 ನಡೆಯಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಯಾವುದೇ ಆಕಾಶಕಾಯಗಳ ಮೇಲೆ ರೋವರ್ ಇಳಿಸುವ ಇಸ್ರೋದ ಮೊದಲ ಅಂತರ್ ಗ್ರಹಗಳ ಯೋಜನೆ ಚಂದ್ರಯಾನ 2 ಆಗಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News