ಆರನೇ ಏಕದಿನ ಪಂದ್ಯ: ಭಾರತಕ್ಕೆ 8 ವಿಕೆಟ್‌ಗಳ ಜಯ

Update: 2018-02-16 17:48 GMT

ಸೆಂಚೂರಿಯನ್, ಫೆ.16: ದಕ್ಷಿಣ ಆಫ್ರಿಕ ವಿರುದ್ಧದ ಆರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂದು ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ

ಗೆಲುವಿಗೆ 205 ರನ್‌ಗಳ ಸವಾಲು ಪಡೆದ ಭಾರತ 32.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 206 ರನ್ ಗಳಿಸಿ ಗೆಲುವಿನ ದಡ ಸೇರಿತು.

 ಇದರೊಂದಿಗೆ ದಕ್ಷಿಣ ಆಫ್ರಿಕ ನೆಲದಲ್ಲಿ ಭಾರತ ಆರು ಪಂದ್ಯಗಳ ಸರಣಿಯನ್ನು 5-1 ಅಂತರದಲ್ಲಿ ಮೊದಲ ಬಾರಿ ಜಯಿಸಿ ಇತಿಹಾಸ ಬರೆದಿದೆ.

ಭಾರತದ ಪರ ವಿರಾಟ್ ಕೊಹ್ಲಿ ಔಟಾಗದೆ 129 ರನ್(96ಎ, 19ಬೌ,2ಸಿ), ಅಜಿಂಕ್ಯ ರಹಾನೆ ಔಟಾಗದೆ 34ರನ್, ಶಿಖರ ಧವನ್ 18 ರನ್ ಮತ್ತು ರೋಹಿತ್ ಶರ್ಮಾ 15 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News