ಮೇಲ್ಸೇತುವೆ ನಿರ್ಮಿಸಿ

Update: 2018-02-16 18:48 GMT

ಮಾನ್ಯರೇ,

ನಗರದ ಬಲ್ಮಠದಲ್ಲಿರುವ ರಸ್ತೆಯು ಸದಾ ಜನನಿಬಿಡ ಪ್ರದೇಶವಾಗಿರುತ್ತದೆ. ಈ ರಸ್ತೆಯ ಒಂದು ಬದಿಯಲ್ಲಿ ಹಲವಾರು ವೈದ್ಯರ ಕ್ಲಿನಿಕ್‌ಗಳಿರುವುದರಿಂದ ಚಿಕಿತ್ಸೆಗಾಗಿ ಹಲವಾರು ಮಂದಿ ನಾಗರಿಕರು ತಮ್ಮ ಮಕ್ಕಳು, ವೃದ್ಧರಾದ ತಂದೆ, ತಾಯಿಯರನ್ನು ಜೊತೆಗೆ ಕರೆದುಕೊಂಡು ರಸ್ತೆಯನ್ನು ದಾಟಬೇಕಾದ ಪರಿಸ್ಥಿತಿ ಇದೆ. ಆದರೆ ಈ ರಸ್ತೆಯಲ್ಲಿ ಸಾಗುವ ವಾಹನಗಳೆಂದೂ ನಗರ ಪ್ರದೇಶವೆಂದು ವೇಗ ಮಿತಿ ಅನುಸರಿಸುವುದಿಲ್ಲ. ಜ್ಯೋತಿ ಸರ್ಕಲ್‌ನಿಂದ ಟ್ರ್ರಾಫಿಕ್ ಸಿಗ್ನಲ್ ದಾಟಿ ಬರುವ ವಾಹನಗಳು ಟ್ರಾಫಿಕ್‌ನಲ್ಲಿ ನಿಲ್ಲುವ ಸಮಯವನ್ನು ಸರಿದೂಗಿಸಲು ಅತ್ಯಂತ ವೇಗವಾಗಿ ಮುಂದೆ ಸಂಚರಿಸುತ್ತವೆ. ಹೀಗಾಗಿ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗುತ್ತದೆ. ಅಲ್ಲದೆ ಈ ರಸ್ತೆಯ ವಿಭಜಕವು ಕೇವಲ ಒಂದೂವರೆ ಅಡಿಯಿದ್ದು ವೃದ್ಧರು, ಮಕ್ಕಳನ್ನು ಕರೆದುಕೊಂಡು ಒಂದು ಬದಿಯ ರಸ್ತೆ ದಾಟಿ ಆ ರಸ್ತೆಯ ಇನ್ನೊಂದು ಪಕ್ಕಕ್ಕೆ ದಾಟಲು ವಿಭಜಕದ ಮೇಲೆ ನಿಂತರೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದೊಮ್ಮೆ ಒಂದಿಷ್ಟು ವಾಲಿ ಕೆಳಗೆ ಬಿದ್ದರೂ ಮುಂದೆ ವೇಗವಾಗಿ ಬರುವ ವಾಹನಕ್ಕೆ ಆಹುತಿಯಾಗುವುದು ಖಚಿತ.

ಆದ್ದರಿಂದ ಸಂಬಂಧ ಪಟ್ಟವರು ಇಲ್ಲಿನ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಈ ಜಾಗದಲ್ಲಿ ಪಾದಚಾರಿಗಳಿಗಾಗಿ ಮೇಲ್ಸೇತುವೆ ನಿರ್ಮಿಸಬೇಕಾಗಿದೆ. 

Writer - ವಿಜಯ ಸುವರ್ಣ, ಮಂಗಳೂರು

contributor

Editor - ವಿಜಯ ಸುವರ್ಣ, ಮಂಗಳೂರು

contributor

Similar News