‘ವಿರಾಟ್ ಕೊಹ್ಲಿ ಪ್ರದರ್ಶನ ಬಣ್ಣಿಸಲು ಶಬ್ದಕೋಶ ಖರೀದಿಸಿ’

Update: 2018-02-17 11:46 GMT

ಸೆಂಚೂರಿಯನ್, ಫೆ.17: ದಕ್ಷಿಣ ಆಫ್ರಿಕ ವಿರುದ್ಧ ಶುಕ್ರವಾರ ನಡೆದ ಆರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್‌ಗಳಿಂದ ಜಯ ಸಾಧಿಸಿದ್ದು, ಪಂದ್ಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಪತ್ರಕರ್ತರಿಗೆ ವಿಚಿತ್ರ ಸಲಹೆ ನೀಡಿದ್ದಾರೆ.

ಕೊಹ್ಲಿ ಆರನೇ ಏಕದಿನ ಪಂದ್ಯದಲ್ಲಿ ಔಟಾಗದೆ 129 ರನ್ ಗಳಿಸಿ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದ ಕೊಹ್ಲಿ ಅದ್ಭುತ ಪ್ರದರ್ಶನವನ್ನು ಮಾಧ್ಯಮಗಳು ಬಣ್ಣಿಸಿದ್ದವು. ‘‘ಪ್ರಶಂಸೆಗಳು ನನಗೆ ದೊಡ್ಡ ವಿಷಯವಲ್ಲ’’ ಎಂದು ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಕೋಚ್ ಶಾಸ್ತ್ರಿ ಅವರು ಕೊಹ್ಲಿ ಪ್ರದರ್ಶನವನ್ನು ಇನ್ನಷ್ಟು ಬಣ್ಣಿಸಬೇಕು ಎಂದು ಮಾಧ್ಯಮಗಳಿಗೆ ಸಲಹೆ ನೀಡಿದ್ದಲ್ಲದೆ, ಕೊಹ್ಲಿಯ ಈಗಿನ ಫಾರ್ಮ್ ಬಣ್ಣಿಸಲು ವಿಶೇಷಣಗಳಿಗಾಗಿ ಹೊಸ ಆವೃತ್ತಿಯ ಆಕ್ಸ್‌ಫರ್ಡ್ ಶಬ್ದಕೋಶ ಖರೀದಿಸುವಂತೆ ಸಲಹೆ ನೀಡಿದ್ದಾರೆ.

‘‘ಒಂದು ವೇಳೆ ನಾನು ನಿಮ್ಮ ಜಾಗದಲ್ಲಿರುತ್ತಿದ್ದರೆ ಪುಸ್ತಕದ ಮಳಿಗೆಗೆ ಭೇಟಿ ನೀಡಿ ಆಕ್ಸಫರ್ಡ್ ಶಬ್ದಕೋಶವನ್ನು ಖರೀದಿಸಿ ತರುತ್ತಿದ್ದೆ’’ಎಂದು ಶಾಸ್ತ್ರಿ ಹೇಳಿದ್ದಾರೆ.

‘‘ಭಾರತ ತಂಡದ ಪ್ರದರ್ಶನ ಕೋಚ್ ಆಗಿ ನನಗೆ ತುಂಬಾ ಹೆಮ್ಮೆ ತಂದಿದೆ. ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋತ ಬಳಿಕ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ಏಕದಿನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಭಾರತ ಕಳೆದ 2 ವಾರಗಳಿಂದ ಅತ್ಯುತ್ತಮ ಪ್ರದರ್ಶನ ನೀಡಿದೆ. ಎಲ್ಲ ಶ್ರೇಯಸ್ಸು ನಾಯಕನಿಗೆ ಸಲ್ಲಬೇಕಾಗಿದೆ. ಏಕೆಂದರೆ ಆತ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದ್ದಾನೆ’’ ಎಂದು ಶಾಸ್ತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News