500 ಕೋಟಿ ಕ್ಲಬ್‌ಗೆ ಪದ್ಮಾವತ್

Update: 2018-02-18 11:57 GMT

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಬಿಡುಗಡೆಗೆ ಮೊದಲು ವಿವಾದದ ಕೆನ್ನಾಲಿಗೆಗೆ ಸಿಲುಕಿದ್ದರೂ,ಈಗ ಗಲ್ಲಾಪೆಟ್ಟಿಗೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದೆ. ಪದ್ಮಾವತ್ ಭಾರತದಲ್ಲಿ ಪ್ರೇಕ್ಷಕರ ಮನಗೆದ್ದಿರುವ ಜೊತೆಗೆ ವಿದೇಶಗಳಲ್ಲೂ ಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಐತಿಹಾಸಿಕ ಹಿನ್ನೆಲೆಯ ಕಥಾವಸ್ತುವನ್ನೊಳಗೊಂಡ ಪದ್ಮಾವತ್ ಈಗಾಗಲೇ ಭಾರತದಲ್ಲಿ 330 ಕೋಟಿ ರೂ. ವಿದೇಶಿ ಸಿನೆಮಾ ಮಾರುಕಟ್ಟೆಯಲ್ಲಿ 172 ಕೋಟಿ ರೂ. ಸಂಪಾದಿಸುವ ಮೂಲಕ ಒಟ್ಟು 502 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ಜನವರಿ 25ರಂದು ತೆರೆಕಂಡ ಪದ್ಮಾವತ್ ಕೇವಲ 18 ದಿನಗಳಲ್ಲಿ 500 ಕೋಟಿ ರೂ. ಸಂಪಾದಿಸಿರುವುದು ಬಾಲಿವುಡ್‌ನ್ನು ಅಚ್ಚರಿಗೊಳಿಸಿದೆ.ರಜಪೂತ ಸಂಘಟನೆ ಕರ್ಣಿಸೇನಾದ ಪ್ರತಿಭಟನೆಯ ಭೀತಿಯ ಹಿನ್ನೆಲೆಯಲ್ಲಿ ಪದ್ಮಾವತ್ ರಾಜಸ್ಥಾನ, ಗುಜರಾತ್, ಹರ್ಯಾಣ,ಮಧ್ಯಪ್ರದೇಶಗಳಲ್ಲಿ ಇನ್ನೂ ಬಿಡುಗಡೆಗೊಂಡಿಲ್ಲ. ಒಂದು ವೇಳೆ ಆ ರಾಜ್ಯಗಳಲ್ಲೂ ಪದ್ಮಾವತ್ ತೆರೆಕಂಡಿದ್ದರೆ, ಚಿತ್ರದ ಗಳಿಕೆ ಕೇವಲ 15 ದಿನಗಳಲ್ಲಿ, 600 ಕೋಟಿ ರೂ. ದಾಟುವ ಎಲ್ಲಾ ಸಾಧ್ಯತೆಗಳಿದ್ದವು.

 ದೇಶ,ವಿದೇಶಗಳ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪದ್ಮಾವತ್‌ನ ಗಳಿಕೆ ಮುಂದಿನ ಒಂದೆರಡು ದಿನಗಳಲ್ಲಿ 500 ಕೋಟಿ ರೂ. ಆಗಲಿದೆ ಎಂದು ಬಾಕ್ಸ್‌ಆಫೀಸ್ ಪಂಡಿತರು ಹೇಳಿಕೊಂಡಿದ್ದಾರೆ. ಪದ್ಮಾವತ್ ಚಿತ್ರವು ಸಂಜಯ್ ಲೀಲಾ ಬನ್ಸಾಲಿಗೆ ಮಾತ್ರವಲ್ಲ ಶಹೀದ್ ಕಪೂರ್, ರಣವೀರ್‌ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರ ಸಿನೆಮಾ ಬದುಕಿನಲ್ಲೇ ಅತಿ ದೊಡ್ಡ ಹಿಟ್ ಚಿತ್ರವೆನಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News