ಕತ್ರಿನಾ ಕೈಫ್ ಸೋದರಿ ಬಾಲಿವುಡ್‌ಗೆ ಎಂಟ್ರಿ

Update: 2018-02-17 12:04 GMT

ಕತ್ರಿನಾ ಕೈಫ್ 2003ರಲ್ಲಿ ‘ಬೂಮ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅಂದಿನಿಂದ ಈತನಕ ಕತ್ರಿನಾ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ನಮಸ್ತೆ ಲಂಡನ್, ಸಿಂಗ್‌ಇಸ್‌ಕಿಂಗ್, ನ್ಯೂಯಾರ್ಕ್, ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಹೀಗೆ ಹತ್ತು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅತ್ಯಂತ ಚ್ಯೂಸಿಯಾಗಿರುವ ಕತ್ರಿನಾ ದಿನದಿಂದ ದಿನಕ್ಕೆ ಬಾಲಿವುಡ್‌ನಲ್ಲಿ ತನ್ನ ತಾರಾಪಟ್ಟವನ್ನು ಭದ್ರಪಡಿಸಿಕೊಳ್ಳುತ್ತಲೇ ಬಂದಿದ್ದಾರೆ.

 ಹೀಗೆ ಕತ್ರಿನಾ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರ್ತಿಗೊಳಿಸಿರುವಂತೆಯೇ ಆಕೆಯ ಕಿರಿಯ ಸಹೋದರಿ ಇಸಾಬೆಲ್, ಬಾಲಿವುಡ್ ನಕ್ಷತ್ರಗಳ ಸಾಲಿಗೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.ಮಾಡೆಲ್ ಆಗಿರುವ ಇಸಾಬೆಲ್,‘ ಟೈಮ್ ಟು ಡ್ಯಾನ್ಸ್’ ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ.ಹೆಸರೇ ಹೇಳುವಂತೆ ಈ ಚಿತ್ರ ನೃತ್ಯಪ್ರಧಾನ ಕಥಾವಸ್ತುವನ್ನು ಹೊಂದಿದೆ.

ಎಬಿಸಿಡಿ ಸರಣಿಯ ಚಿತ್ರಗಳ ನಿರ್ದೇಶಕ ರೆಮೋ ಡಿಸೋಜಾಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸ್ಟಾನ್ಲಿ ಡಿಸೋಜಾ ಈ ಚಿತ್ರಕ್ಕೆ ನಿರ್ದೇಶಕರು. ನಾಯಕ ಪಾತ್ರಕ್ಕೆ ಸೂರಜ್‌ಪಾಂಚೋಲಿ ಆಯ್ಕೆಯಾಗಿದ್ದು, ನಾಯಕಿಯಾಗಿ ಇಸಾಬೆಲ್ ನಟಿಸಲಿದ್ದಾರೆ. ಟೈಮ್ ಟು ಡ್ಯಾನ್ಸ್‌ನಲ್ಲಿ ಅದ್ಭುತವಾದ ನೃತ್ಯದ ಸನ್ನಿವೇಶಗಳಿದ್ದು, ಇದಕ್ಕಾಗಿ ಸೂರಜ್ ಹಾಗೂ ಇಸಾಬೆಲ್, ನಿರಂತರವಾಗಿ ಡಾನ್ಸ್ ರಿಹರ್ಸಲ್ ನಡೆಸುತ್ತಿದ್ದಾರಂತೆ. ಟೈಮ್ ಟು ಡ್ಯಾನ್ಸ್ ಚಿತ್ರದ ಮೂಲಕ ಇಸಾಬೆಲ್‌ಗೆ ಬಾಲಿವುಡ್‌ನಲ್ಲಿ ಅದೃಷ್ಟದ ಬಾಗಿಲು ತೆರೆಯುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News