ಪರೀಕ್ಷೆಯಲ್ಲಿ ಸಾಮೂಹಿಕ ನಕಲು: 1,000 ವಿದ್ಯಾರ್ಥಿಗಳು ಡಿಬಾರ್ !

Update: 2018-02-17 14:02 GMT
ಸಾಂದರ್ಭಿಕ ಚಿತ್ರ

ಪಾಟ್ನ, ಫೆ.17: 12ನೇ ತರಗತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಸುಮಾರು 1,000 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ನಡೆದ ಪರೀಕ್ಷೆ ಬರೆಯುವ ಸಂದರ್ಭ ಸಾಮೂಹಿಕ ನಕಲು ನಡೆಸುತ್ತಿದ್ದ ಕನಿಷ್ಟ 1,000 ವಿದ್ಯಾರ್ಥಿಗಳನ್ನು ಉಚ್ಛಾಟಿಸಲಾಗಿದೆ ಎಂದು ಬಿಹಾರ ಶಾಲಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಆನಂದ್ ಕಿಶೋರ್ ತಿಳಿಸಿದ್ದಾರೆ. ಫೆ.6ರಂದು ಪರೀಕ್ಷೆ ಆರಂಭವಾಗಿದ್ದು , ಇದುವರೆಗೆ 25 ‘ನಕಲಿ ಪರೀಕ್ಷಕ’ರನ್ನು ಬಂಧಿಸಲಾಗಿದೆ. ಅಲ್ಲದೆ ಪರೀಕ್ಷೆಯಲ್ಲಿ ಅವ್ಯವಹಾರ ಎಸಗಲು ತಮ್ಮ ಮಕ್ಕಳಿಗೆ ನೆರವಾಗುತ್ತಿದ್ದ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದವರು ತಿಳಿಸಿದ್ದಾರೆ.

 ಈ ಹಿಂದೆ ಬಿಹಾರದಲ್ಲಿ ಪರೀಕ್ಷೆಯ ಸಂದರ್ಭ ಸಾಮೂಹಿಕ ವಂಚನೆ ಎಸಗಲಾಗುತ್ತಿತ್ತು. ಆದರೆ ಇನ್ನು ಮುಂದೆ ಇಂತಹ ಘಟನೆ ನಡೆಯದು. ಈ ಬಾರಿ ಕ್ರಮಬದ್ಧವಾಗಿ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದಾದ್ಯಂತದ 1,384 ಕೇಂದ್ರಗಳಲ್ಲಿ ಸುಮಾರು 112,07,986 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News