ನಿಮಗೆ ಬೇಕಾದರೆ ಬೀಫ್ ತಿನ್ನಿ ಎಂದು ಹೇಳಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

Update: 2018-02-19 17:34 GMT

ಮುಂಬೈ, ಫೆ.19: ದೇಶದಲ್ಲಿರುವ ಯಾರು ಕೂಡ ಅವರಿಗೆ ಬೇಕಾದರೆ ಬೀಫ್ ತಿನ್ನಬಹುದು. ಆದರೆ ಬೀಫ್ ಹೆಸರಲ್ಲಿ ಉತ್ಸವ ನಡೆಸುವುದು ಏಕೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ.

ಇಲ್ಲಿನ ಆರ್. ಎ. ಪೋಡ್ಡರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನೀವು ಬೀಫ್ ತಿನ್ನಲು ಬಯಸಿದ್ದಲ್ಲಿ, ಧಾರಾಳವಾಗಿ ತಿನ್ನಬಹುದು. ಆದರೆ ‘ಕಿಸ್ ಫೆಸ್ಟಿವಲ್’ನಂತೆ ಉತ್ಸವ ಆಚರಿಸುವುದೇಕೆ?, ನೀವು ಯಾರಿಗಾದರೂ ಚುಂಬಿಸಲು ಬಯಸಿದ್ದಲ್ಲಿ ಅದಕ್ಕೆ ಉತ್ಸವ ಅಥವಾ ಇನ್ನೊಬ್ಬರ ಅನುಮತಿಯ ಅಗತ್ಯವೇನಿದೆ” ಎಂದವರು ಹೇಳಿದ್ದಾರೆ.

2017ರಲ್ಲಿ ಐಐಟಿ ಮದ್ರಾಸ್ ನಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಬೀಫ್ ಫೆಸ್ಟಿವಲನ್ನು ಉದ್ದೇಶಿಸಿ ವೆಂಕಯ್ಯ ನಾಯ್ಡು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. 2017ರ ಜೂನ್ ನಲ್ಲಿ ಕೊಚ್ಚಿಯಲ್ಲಿ ಯುವ ಕಾಂಗ್ರೆಸ್ ಬೀಫ್ ಫೆಸ್ಟಿವಲ್ ಅನ್ನು ಹಮ್ಮಿಕೊಂಡಿತ್ತು.

ಆಹಾರದ ಆಯ್ಕೆ ವೈಯಕ್ತಿಕ ವಿಚಾರ ಎಂದು ಈ ಹಿಂದೆಯೂ ನಾಯ್ಡು  ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News