‘ತೆಂಡುಲ್ಕರ್ ಶತಕದ ದಾಖಲೆ ಕೊಹ್ಲಿ ಮುರಿಯಲಿದ್ದಾರೆ’

Update: 2018-02-19 18:46 GMT

ಬೆಂಗಳೂರು, ಫೆ.19: ‘‘ಭಾರತದ ನಾಯಕ ವಿರಾಟ್ ಕೊಹ್ಲಿ 100 ಅಂತಾರಾಷ್ಟ್ರೀಯ ಶತಕಗಳನ್ನು ದಾಖಲಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ರ ದಾಖಲೆಯನ್ನು ಮುರಿಯಲಿದ್ದಾರೆ’’ ಎಂದು ಮಾಜಿ ಕ್ರಿಕೆಟ್ ದಂತಕತೆ ಗುಂಡಪ್ಪ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು ಇತ್ತೀಚೆಗೆ ಕೊನೆಗೊಂಡಿರುವ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಸರಣಿಯಲ್ಲಿ 35ನೇ ಶತಕ ದಾಖಲಿಸಿದ್ದರು. ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 21 ಶತಕ ದಾಖಲಿಸಿದ್ದಾರೆ. ಕೊಹ್ಲಿ ಈ ತನಕ ಒಟ್ಟು 56 ಅಂತಾರಾಷ್ಟ್ರೀಯ ಶತಕ ಗಳಿಸಿದ್ದು, ತೆಂಡುಲ್ಕರ್ ಗರಿಷ್ಠ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ‘‘ಕೊಹ್ಲಿ ಸ್ಥಿರ ಪ್ರದರ್ಶನ ಅದ್ಭುತ, ಅವರು ರನ್‌ಗಾಗಿ ಹಸಿದಿದ್ದಾರೆ. ಕೊಹ್ಲಿ ಸ್ಥಿರ ಪ್ರದರ್ಶನ ಮುಂದುವರಿಸಿ ನಿರಂತರವಾಗಿ ಶತಕ ದಾಖಲಿಸಿದರೆ ತೆಂಡುಲ್ಕರ್ ದಾಖಲೆಯನ್ನು ಮುರಿಯುವ ಎಲ್ಲ ಸಾಧ್ಯತೆಯಿದೆ. ಎಲ್ಲ ದಾಖಲೆಗಳು ಇರುವುದು ಮುರಿಯುವುದಕ್ಕಾಗಿ. ಕೊಹ್ಲಿ ಈ ಸಾಧನೆ ಮಾಡಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಇದರಿಂದ ತೆಂಡುಲ್ಕರ್‌ಗೆ ಖುಷಿಯಾಗಬಹುದು. ಆದರೆ, ಇದಕ್ಕೆ ಇನ್ನಷ್ಟು ಸಮಯ ಬೇಕಾಗಬಹುದು’’ ಎಂದು 65ರ ಹರೆಯದ ವಿಶ್ವನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News