ಲಂಡನ್ ಫ್ಯಾಶನ್ ವೀಕ್ ನಲ್ಲಿ ಹಿಜಾಬ್ ಧರಿಸಿ ಗಮನಸೆಳೆದ ಲಿಂಡ್ಸೇ ಲೋಹನ್

Update: 2018-02-22 16:25 GMT

ಲಂಡನ್, ಫೆ.22: ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನುವ ವದಂತಿಗಳಿಂದ ಇತ್ತೀಚೆಗೆ ಸುದ್ದಿಯಾಗಿದ್ದ ಹಾಲಿವುಡ್ ನಟಿ ಲಿಂಡ್ಸೇ ಲೋಹನ್ ಲಂಡನ್ ಫ್ಯಾಶನ್ ವೀಕ್ ನಲ್ಲಿ ಹಿಜಾಬ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ದುಬೈಯಲ್ಲಿ ವಾಸಿಸುತ್ತಿರುವ ಲೋಹನ್ ರ ಫೋಟೊ ಆನ್ ಲೈನ್ ನಲ್ಲಿ ವೈರಲ್ ಆಗುತ್ತಿದೆ.

ಹಿಜಾಬ್ ಧರಿಸಲು ಲಿಂಡ್ಸೇ ಲೋಹನ್ ಕಲಿಯುತ್ತಿರುವ ವಿಡಿಯೋವೊಂದನ್ನು ಅವರು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು, ಇಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂದರ್ಭ ಲಿಂಡ್ಸೇ ‘ಹಲಾಲ್ ಸೌಂದರ್ಯವರ್ಧಕ’ಗಳನ್ನು ಬಳಸಿದ್ದರು ಎನ್ನಲಾಗಿದೆ.

ಹಲಾಲ್/ಸಸ್ಯಾಹಾರಿ ಸೌಂದರ್ಯವರ್ಧಕಗಳ ರಿಟೇಲರ್ ಹವಾ ಕಾಸ್ಮೆಟಿಕ್ಸ್ ಇದನ್ನು ಸ್ಪಷ್ಟಪಡಿಸಿದೆ,ಸಾಮಾಜಿಕ ಜಾಲತಾಣದಲ್ಲಿ ಲಿಂಡ್ಸೇ ಲೋಹನ್ ರ ಹಿಜಾಬ್ ಧಿರಿಸಿಗೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News