20 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಜಯಿಸಿದ ಅಮೆರಿಕ

Update: 2018-02-22 18:51 GMT

ನ್ಯೂಯಾರ್ಕ್,ಫೆ.22: ಪಿಯೊಂಗ್‌ಚಾಂಗ್ ಚಳಿಗಾಲದ ಒಲಿಂಪಿಕ್ ಗೇಮ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೆನಡಾವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಅಂತರದಿಂದ ಮಣಿಸಿದ ಅಮೆರಿಕದ ಮಹಿಳೆಯರ ಐಸ್ ಹಾಕಿ ತಂಡ 20 ವರ್ಷಗಳ ಬಳಿಕ ಚಿನ್ನ ಗೆದ್ದುಕೊಂಡಿದೆ. ಸತತ ನಾಲ್ಕು ಬಾರಿಯ ಚಾಂಪಿಯನ್ ಕೆನಡಾವನ್ನು ರೋಚಕವಾಗಿ ಸದೆ ಬಡಿದಿರುವ ಅಮೆರಿಕ 1998ರ ಬಳಿಕ ಮೊದಲ ಬಾರಿ ಒಲಿಂಪಿಕ್ಸ್ ಚಾಂಪಿಯನ್‌ಪಟ್ಟಕ್ಕೇರಿದೆ.

ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News