×
Ad

ಆದಿತ್ಯನಾಥ್ ಭೇಟಿ ಹಿನ್ನೆಲೆ : ಮಥುರಾದ ಗೋಡೆಗಳಿಗೆ ಕೇಸರಿ ಬಣ್ಣ !

Update: 2018-02-23 17:14 IST

ಮಥುರಾ,ಫೆ.23 : ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ನಗರದಲ್ಲಿ ನಡೆಯಲಿರುವ ಲಾಥ್ಮರ್ ಹೋಳಿ ಹಬ್ಬದಲ್ಲಿ ಭಾಗವಹಿಸಲು ಫೆಬ್ರವರಿ 24ರಂದು ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರದ ಎಲ್ಲಾ ಕಟ್ಟಡಗಳು ಹಾಗೂ ಗೋಡೆಗಳು ಕೇಸರಿಮಯವಾಗತೊಡಗಿವೆ.

ಮುಖ್ಯಮಂತ್ರಿಗೆ ಸ್ವಾಗತ ಕೋರಲು ಸರ್ವರೀತಿಯಲ್ಲೂ ಸಜ್ಜಾಗುತ್ತಿರುವ ಮಥುರಾ ನಗರ ಪಂಚಾಯತ್ ಸ್ವಚ್ಛತೆ ಕಾಪಾಡುವುದರಿಂದ ಹಿಡಿದು ನಗರವನ್ನು ಕೇಸರಿಮಯಗೊಳಿಸುವತ್ತಲೂ ಹೆಚ್ಚಿನ ಗಮನ ನೀಡಿದೆ.

"ತಯಾರಿ ಭರದಿಂದ ಸಾಗಿದೆ. ನಗರ ಪಂಚಾಯತ್ ಸರ್ವ ಸೌಲಭ್ಯಗಳನ್ನೂ ಒದಗಿಸುತ್ತಿದೆ. ಇಡೀ ನಗರವನ್ನು ಸ್ವಚ್ಛಗೊಳಿಸಲಾಗುತ್ತಿದೆ,'' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಪ್ರತಿ ವರ್ಷ ನಾವು ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸುತ್ತೇವೆ. ಆದರೆ ಈ ಬಾರಿ ಅದು ಕೇಸರಿಮಯಗೊಂಡಿದೆ. ಏನಿದ್ದರೂ ಮುಖ್ಯಮಂತ್ರಿ ನಮ್ಮ ನಗರಕ್ಕೆ ಬಂದು ನಮ್ಮೊಂದಿಗೆ ಹಬ್ಬ ಆಚರಿಸುತ್ತಾರೆಂದು ತಿಳಿದು ಸಂತೋಷವಾಗಿದೆ,'' ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News