×
Ad

ತ್ರಿಪುರ: ಆರು ಬೂತ್‌ಗಳಲ್ಲಿ ಫೆ.26ರಂದು ಮರುಮತದಾನ

Update: 2018-02-23 21:40 IST

ಅಗರ್ತಲ, ಫೆ.23: ತ್ರಿಪುರಾದ ಆರು ಕ್ಷೇತ್ರಗಳಲ್ಲಿ ಫೆ.26ರಂದು ಮರುಮತದಾನ ನಡೆಸುವಂತೆ ಚುನಾವಣಾ ಆಯೋಗ ತಿಳಿಸಿದೆ.

ಸೋನಾಮುರ, ತೆಲಿಯಮುರ, ಆಂಪಿನಗರ ಮತ್ತು ಕಡಮ್‌ತಲ-ಕುರ್ತಿ, ಸಬ್ರೂಮ್ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಮತದಾನದ ಸಂದರ್ಭ ಈ ಕ್ಷೇತ್ರಗಳಲ್ಲಿ ಇರುವ ಮತದಾರರ ಸಂಖ್ಯೆ ಹಾಗೂ ಚಲಾವಣೆಯಾದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುವ ಕಾರಣ ಮತದಾನವನ್ನು ಅಸಿಂಧು ಎಂದು ಘೋಷಿಸಿರುವ ಆಯೋಗ ಫೆ.26ರಂದು ಮರುಮತದಾನ ನಡೆಸಲು ಸೂಚಿಸಿದೆ.

 ಇನ್ನುಳಿದ ಏಳು ಬೂತ್‌ಗಳಲ್ಲಿ ಮತದಾನದ ವೇಳೆ ಅಕ್ರಮ ನಡೆದಿದೆ ಎಂಬುದನ್ನು ತಳ್ಳಿಹಾಕಿರುವ ಆಯೋಗ, ನಿಯಂತ್ರಣಾ ಕೊಠಡಿಯಿಂದ ಅಣಕು ಮತದಾನದ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭ ಈ ಏಳು ಬೂತ್‌ಗಳಲ್ಲಿ ಚಲಾವಣೆಯಾದ ಮತಗಳನ್ನು ಚುನಾವಣಾಧಿಕಾರಿ ಪರಿಗಣಿಸಿಲ್ಲ ಎಂದು ತಿಳಿಸಿದೆ. ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಸ್ಪರ್ಧಿಸಿರುವ ಧಾನ್‌ಪುರ ಕ್ಷೇತ್ರವೂ ಸೇರಿದಂತೆ 13 ಬೂತ್‌ಗಳಲ್ಲಿ ಮತದಾನದ ವೇಳೆ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಇಲ್ಲಿ ವಿವಿಪಿಎಟಿ ರಶೀದಿಗಳನ್ನು ಲೆಕ್ಕ ಹಾಕಬೇಕು ಎಂದು ಮಂಗಳವಾರ ಸಿಪಿಐ(ಎಂ) ಮುಖಂಡ ನೀಲೋತ್ಪಲ್ ಬಸು ಆಯೋಗಕ್ಕೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News