ನೀರವ್ ಮೋದಿ ಬ್ರಾಂಡ್ ಅಂಬಾಸಿಡರ್ ಹುದ್ದೆ ತ್ಯಜಿಸಿದ ಪ್ರಿಯಾಂಕಾ ಚೋಪ್ರಾ

Update: 2018-02-23 16:18 GMT

ಹೊಸದಿಲ್ಲಿ, ಫೆ.23: ನೀರವ್ ಮೋದಿಯ ಚಿನ್ನಾಭರಣಗಳ ಉತ್ಪನ್ನಗಳ ಪ್ರಚಾರ ರಾಯಭಾರಿ(ಬ್ರಾಂಡ್ ಅಂಬಾಸಿಡರ್) ಹುದ್ದೆಯನ್ನು ತ್ಯಜಿಸಿರುವುದಾಗಿ ನಟಿ ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ತಮ್ಮ ಚಿನ್ನಾಭರಣಗಳ ಪ್ರಚಾರ ರಾಯಭಾರಿಯಾಗಿ ಖ್ಯಾತ ನಟಿ ಪ್ರಿಯಾಂಕ ಚೋಪ್ರಾರನ್ನು ನೀರವ್ ಮೋದಿ ಆಯ್ಕೆ ಮಾಡಿದ್ದರು. ಆದರೆ ಇದೀಗ ಮೋದಿ ಪಿಎನ್‌ಬಿ ಹಗರಣದಲ್ಲಿ ಪ್ರಧಾನ ಆರೋಪಿಯಾಗಿರುವ ಹಿನ್ನೆಲೆಯಲ್ಲಿ, ಈ ಹುದ್ದೆ ತ್ಯಜಿಸಲು ನಿರ್ಧರಿಸಿರುವುದಾಗಿ ಪ್ರಿಯಾಂಕ ಚೋಪ್ರಾ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News