ಸೈಫ್, ನವಾಝುದ್ದೀನ್ ಹೊಸ ಚಿತ್ರ , ಅಲ್ಲಲ್ಲ ವೆಬ್ ಸರಣಿಯ ಫಸ್ಟ್ ಲುಕ್ ಬಿಡುಗಡೆ

Update: 2018-02-23 16:46 GMT

ಏನಿದು ನೆಟ್ ಫ್ಲಿಕ್ಸ್ ವೆಬ್ ಸರಣಿ ?

ಸಿನಿಮಾಕ್ಕೂ ಇದಕ್ಕೂ ಏನು ವ್ಯತ್ಯಾಸ ? 

ಇಲ್ಲಿದೆ ಸಮಗ್ರ ಮಾಹಿತಿ 

ಹೊಸದಿಲ್ಲಿ, ಫೆ.23: ಸೈಫ್ ಅಲಿಖಾನ್, ನವಾಝುದ್ದೀನ್ ಸಿದ್ದಿಕಿ ಹಾಗು ರಾಧಿಕಾ ಆಪ್ಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಭಾರತದ ಪ್ರಪ್ರಥಮ ನೆಟ್ ಫ್ಲಿಕ್ಸ್ ವೆಬ್ ಸರಣಿ ‘ಸೇಕ್ರೆಡ್ ಗೇಮ್ಸ್’ನ ಫಸ್ಟ್ ಲುಕ್ ಗಳು ಬಿಡುಗಡೆಯಾಗಿವೆ.

ಮುಖದ ತುಂಬಾ ರಕ್ತದ ಕಲೆಗಳಿರುವ ಸಿಖ್ ಪೇಟಧಾರಿ ಸೈಫ್ ಅಲಿಖಾನ್ ಪೊಲೀಸ್ ಅಧಿಕಾರಿಯಾಗಿರುವ, ಪೈಜಾಮ ತೊಟ್ಟು ಕನ್ನಡಿ ಎದುರು ನಿಂತಿರುವ ಹಾಗು ರಾಧಿಕಾ ಆಪ್ಟೆಯ ಫಸ್ಟ್ ಲುಕ್ ಗಳನ್ನು ನೆಟ್ ಫ್ಲಿಕ್ಸ್ ಬಿಡುಗಡೆ ಮಾಡಿದೆ.

‘ಸೇಕ್ರೆಡ್ ಗೇಮ್ಸ್’ ಎಂಬ ವಿಕ್ರಮ್ ಚಂದ್ರರ ಪುಸ್ತಕವನ್ನಾಧರಿಸಿದ ಅದೇ ಹೆಸರಿನ ಈ ವೆಬ್ ಸರಣಿಯನ್ನು ವಿಕ್ರಮಾದಿತ್ಯ ಮೋಟ್ವಾನೆ ಹಾಗು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ.

ನೆಟ್ ಫ್ಲಿಕ್ಸ್ ಎಂದರೇನು?

ಅಮೆರಿಕ ಮೂಲದ ನೆಟ್ ಫ್ಲಿಕ್ಸ್ ಕಂಪೆನಿಯ ಸ್ಥಾಪಕರು ರೀಡ್ ಹ್ಯಾಸ್ಟಿಂಗ್ಸ್ ಹಾಗು ಮಾರ್ಕ್ ರ್ಯಾಂಡೋಲ್ಫ್. ಆನ್ ಲೈನ್ ನಲ್ಲೇ ವೆಬ್ ಸರಣಿಗಳನ್ನು ಹಣ ಪಾವತಿಸಿ ವೀಕ್ಷಿಸಬಹುದಾದ ಅವಕಾಶವನ್ನು ನೆಟ್ ಫ್ಲಿಕ್ಸ್ ಒದಗಿಸುತ್ತದೆ. ಸಿನೆಮಾ ಮಂದಿರಗಳಲ್ಲೋ ಅಥವಾ ಚಾನೆಲ್ ಗಳಲ್ಲೋ ಸಿನೆಮಾಗಳನ್ನು ನೋಡುವ ಬದಲು ಆನ್ ಲೈನ್ ನಲ್ಲೇ ಈ ಮೂಲಕ ನಿರ್ದಿಷ್ಟ ಮೊತ್ತವನ್ನು ಪಾವತಿಸಿ ವೆಬ್ ಸರಣಿಗಳನ್ನು ವೀಕ್ಷಿಸಬಹುದಾಗಿದೆ.

ನೆಟ್ ಫ್ಲಿಕ್ಸ್ ಮೂಲಕ ವೆಬ್ ಸರಣಿಗಳನ್ನು ವೀಕ್ಷಿಸುವುದು ಹೇಗೆ?

ನೆಟ್ ಫ್ಲಿಕ್ಸ್ ನಲ್ಲಿ ವೆಬ್ ಸರಣಿಗಳನ್ನು ವೀಕ್ಷಿಸಲು www.netflix.com/in/ಗೆ ಭೇಟಿ ನೀಡಬೇಕು. ಇಲ್ಲದಿದ್ದರೆ ಸರ್ಚ್ ಎಂಜಿನ್ ನಲ್ಲಿ ನೆಟ್ ಫ್ಲಿಕ್ಸ್ ವೆಬ್ ಸೈಟ್ ಎಂದು ಹುಡುಕಿದರೂ ನೆಟ್ ಫ್ಲಿಕ್ಸ್ ವೆಬ್ ಸೈಟ್ ಕಾಣಿಸಿಕೊಳ್ಳುತ್ತದೆ. ಮೊಬೈಲ್ ಬ್ರೌಸರ್ ಗಳಲ್ಲೂ ನೆಟ್ ಫ್ಲಿಕ್ಸ್ ವೆಬ್ ಸೈಟ್ ಗೆ ಭೇಟಿ ನೀಡಬಹುದು.  ನಂತರ ನೆಟ್ ಫ್ಲಿಕ್ಸ್ ಗೆ ಸೈನ್ ಅಪ್ ಆಗಬೇಕು.

Join Free For A Month ಎನ್ನುವ ಆಯ್ಕೆಯಿದ್ದು, ಇದು ಕೆಲ ರಾಷ್ಟ್ರಗಳಲ್ಲಿ ಮಾತ್ರ ಲಭ್ಯವಾಗಲಿದೆ. ನಿಮಗೆ ಎಚ್ ಡಿ ಗುಣಮಟ್ಟದ ವಿಡಿಯೋ ಬೇಕಾದಲ್ಲಿ ಸ್ಟ್ಯಾಂಡರ್ಡ್ ಅಥವಾ ಪ್ರೀಮಿಯಂ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಅದಕ್ಕೂ ಮೊದಲು ನೀವು ನೆಟ್ ಫ್ಲಿಕ್ಸ್ ಗೆ ಸಬ್ ಸ್ಕ್ರೈಬ್ ಆಗಬೇಕಾಗಿದೆ.

ನಂತರ ನಿಮ್ಮ ಇಮೇಲ್ ಹಾಗು ಪಾಸ್ ವರ್ಡ್ ಮೂಲಕ ಖಾತೆಯೊಂದನ್ನು ತೆರೆಯಬೇಕು. ನಂತರ ರಿಜಿಸ್ಟರ್ ಆಗಬೇಕು. ನಂತರ ನಿಮ್ಮ ಹಣ ಪಾವತಿಯ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ಪೇಮೆಂಟ್ ವಿವರಗಳನ್ನು ನೆಟ್ ಫ್ಲಿಕ್ಸ್ ಗೆ ಒದಗಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News