ನೆಹರೂ, ಕಾಂಗ್ರೆಸ್, ಖಿಲ್ಜಿ..ನೋಟು ರದ್ದತಿ ವೈಫಲ್ಯಕ್ಕೆ ಯಾರನ್ನು ದೂಷಿಸುತ್ತೀರಿ?

Update: 2018-02-28 14:56 GMT

ಹೊಸದಿಲ್ಲಿ, ಫೆ.28: ನೋಟು ರದ್ದತಿಯ ಬಗ್ಗೆ ಪ್ರಧಾನಿ ಹೇಳಿಕೊಂಡು ಬಂದ ಎಲ್ಲಾ ಸಮರ್ಥನೆಗಳೂ ಸುಳ್ಳಾಗಿವೆ. ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ, ನಿರುದ್ಯೋಗ, ಆರ್ಥಿಕ ಸಂಕಷ್ಟಗಳಿಗೆ ಈಗ ಯಾರನ್ನು ದೂಷಿಸುತ್ತೀರಿ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ಮಾನ್ಯರೇ ನೋಟು ರದ್ದತಿ ಬಗ್ಗೆ ನೀವು ನೀಡಿದ ಎಲ್ಲ ಸಮರ್ಥನೆಗಳೂ ಸುಳ್ಳಾಗಿವೆ. ಭಯೋತ್ಪಾದನೆ ಮುಗಿಲು ಮುಟ್ಟಿದೆ. ಆರ್ಥಿಕತೆ ಕುಸಿಯುತ್ತಿದೆ. 19 ವರ್ಷಗಳಲ್ಲಿ ಮೊದಲ ಬಾರಿಗೆ ಎಸ್‍ಬಿಐ ನಷ್ಟ ಅನುಭವಿಸಿದೆ. ಬಹುತೇಕ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಅಪಾಯದ ಅಂಚಿನಲ್ಲಿವೆ. ಎಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಯಾರನ್ನು ಇದಕ್ಕೆ ದೂಷಿಸಬೇಕು? ನೆಹರೂ, ಕಾಂಗ್ರೆಸ್, ಖಿಲ್ಜಿ ಅಥವಾ ಒನ್ ಮ್ಯಾನ್ ಶೋ ಟೂ ಮ್ಯಾನ್ ಆರ್ಮಿಯನ್ನೇ?" ಎಂದು ಪಟ್ನಾಸಾಹಿಬ್ ಕ್ಷೇತ್ರದ ಸಂಸದ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

2016ರ ನವೆಂಬರ್ 8ರಂದು ಮೋದಿ 500 ಮತ್ತು 100 ರೂಪಾಯಿ ನೋಟುಗಳ ಕಾನೂನುಬದ್ಧ ಚಲಾವಣೆಯನ್ನು ರದ್ದು ಮಾಡಿದ್ದರು. ದೇಶದಲ್ಲಿ ಚಲಾವಣೆಯಲ್ಲಿದ್ದ ಶೇಕಡ 81ರಷ್ಟು ನಗದನ್ನು ಅಮಾನ್ಯಗೊಳಿಸಿದ್ದರು. ಬಳಿಕ ಸರ್ಕಾರ 500 ಹಾಗು 2,000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿತ್ತು. ನಗದು ಕೊರತೆ ನೀಗಿಸುವ ಸಲುವಾಗಿ 2017ರಲ್ಲಿ ಸರ್ಕಾರ 200 ರೂಪಾಯಿ ನೋಟು ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News