ಶುಹೈಬ್ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ
ಮಟ್ಟನ್ನೂರ್,ಮಾ.2: ಯುವ ಕಾಂಗ್ರೆಸ್ ನಾಯಕ ಶುಹೈಬ್ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಕ್ಕಾಡಿನಸಂಗೀತ್ ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದು, ನಿನ್ನೆ ತೆರೂರ್ ಪಾಲದ ಸಂಜಯ್(24) ಎಂಬಾತನನ್ನು ಬಂಧಿಸಲಾಗಿತ್ತು. ಶುಹೈಬ್ ಕೊಲೆಗೆ ಬಳಸಿದಆಯುಧವನ್ನು ಈತ ಅಡಗಿಸಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜಯ್‍ನನ್ನು ಬಂಧಿಸಿದ ಬಳಿಕ ಗುರುವಾರ ರಾತ್ರಿ ಮಟ್ಟನ್ನೂರ್ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ರಿಮಾಂಡ್ ವಿಧಿಸಲಾಗಿದೆ. ರಜತ್‍ನನ್ನುಇಂದು ಕೋರ್ಟಿಗೆ ಹಾಜರುಪಡಿಸುತ್ತಿದ್ದು, ಶುಹೈಬ್ ಗೂಡಂಗಡಿ ಬಳಿ ಇದ್ದಾನೆ ಎಂದು ದುಷ್ಕರ್ಮಿಗಳಿಗೆ ಈತ ತಿಳಿಸಿದ್ದ ಎನ್ನುವುದು ಪೊಲೀಸ್ ವಿಚಾರಣೆಯಲ್ಲಿತಿಳಿದು ಬಂದಿದೆ.
ಡಿವೈಎಫ್‍ಐ, ಎಸ್‍ಎಫ್‍ಐ ಕಾರ್ಯಕರ್ತರಾದ ತಿಲ್ಲಂಗೇರಿ ಆಲಯಾಟ್ ಅನ್ವರ್ ಸಾದಾತ್, ಮಿತ್ತಲೆ ಪಾಲಯೋಟ್ಟ್ ಕೆ. ಅಖಿಲ್ ,ತೆರೂರ್ ಪಪಾಲಯೋಟ್ಟ್ಟಿ.ಕೆ. ಅಖಿಲ್, ತಿಲ್ಲಂಗೇರಿ ಆಕಾಶ್ ರಿಜಿನ್ ರಾಜ್,ಜಿತಿನ್‍ರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿಗಳು