×
Ad

ತಿರುಪತಿ: ಕೆಂಪು ಮರಳು ಸಾಗಾಟಗಾರರೆಂದು ಶಂಕಿಸಿ 80 ಮಂದಿ ಮರದ ಕೆಲಸಗಾರರ ಬಂಧನ

Update: 2018-03-02 22:31 IST

ತಿರುಪತಿ, ಮಾ. 2: ಆಂಧ್ರ ಪೊಲೀಸರು ಶುಕ್ರವಾರ ಆಂಜನೇಯಪುರದಿಂದ ಕೆಂಪು ಮರಳು ಸಾಗಾಟಗಾರರು ಎಂದು ಶಂಕಿಸಿ 80 ಮಂದಿ ಮರದ ಕೆಲಸಗಾರರನ್ನು ಬಂಧಿಸಿದ್ದಾರೆ.

ತಮಿಳು ನಾಡಿನ ಆರ್ಕೋಟದಿಂದ ಸುಮಾರು ಮುಂಜಾನೆ 2 ಗಂಟೆಗೆ ಲಾರಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೋಗುತ್ತಿದ್ದ 80 ಮರದ ಕೆಲಸಗಾರರನ್ನು ಕೆಂಪು ಮರಳು ಅಕ್ರಮ ಸಾಗಾಟ ವಿರೋಧಿ ಕಾರ್ಯ ಪಡೆ ಬಂಧಿಸಿತು ಎಂದು ಮೂಲಗಳು ತಿಳಿಸಿವೆ.

 ಬಂಧಿತರಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಎಂದು ಅವರು ತಿಳಿಸಿದ್ದಾರೆ. ಮರದ ಕೆಲಸಗಾರರ ಲಾರಿಯ ಚಲನವಲನದ ಬಗ್ಗೆ ಕಾರ್ಯಪಡೆ ಕಣ್ಣಿರಿಸಿತ್ತು. ಲಾರಿ ಆಂಧ್ರಪ್ರದೇಶದಲ್ಲಿರುವ ಶೇಷಾಚಲಂ ಪರ್ವತ ಶ್ರೇಣಿಯತ್ತ ಸಂಚರಿಸುತ್ತಿದ್ದ ಸಂದರ್ಭ ತಡೆದು ಮರದ ಕೆಲಸಗಾರರನ್ನು ಬಂಧಿಸಿತು ಎಂದು ಅವರು ತಿಳಿದ್ದಾರೆ.

ತಮಿಳುನಾಡಿನ ಶಂಕಿತ 500 ಮರದ ಕೆಲಸಗಾರರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿ ಫೆಬ್ರವರಿ 28ರಂದು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಸಲ್ಲಿಸಲಾಗಿತ್ತು. ಮರದ ಕೆಲಸಗಾರರನ್ನು ವಿನಾಕಾರಣ ಬಂಧಿಸಿ ತಪ್ಪೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಮನವಿ ಮಾಡಲಾಗಿತ್ತು. ನ್ಯಾಯವಾದಿ ಪಿ. ಪುಗಳೇಂದಿ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News