×
Ad

ಎಸ್ ಪಿಗೆ ಆನೆಬಲ: ಅಖಿಲೇಶ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ ಬಿಎಸ್ ಪಿ

Update: 2018-03-04 15:52 IST

ಲಕ್ನೋ, ಮಾ.4: ಉತ್ತರ ಪ್ರದೇಶದ ಫುಲ್ಪುರ್ ಹಾಗು ಗೋರಖ್ ಪುರ್ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಘೋಷಿಸಿದೆ.

2017ರ ಚುನಾವಣೆಯಲ್ಲಿ ಕಳೆದುಕೊಂಡ ಸೀಟುಗಳನ್ನು ಮರಳಿ ಪಡೆಯಲು ಎರಡೂ ಪಕ್ಷಗಳು ಸಜ್ಜಾಗಿದೆ. ಎಸ್ ಪಿಯ ನಾಗೇಂದ್ರ ಸಿಂಗ್ ಪಟೇಲ್ ರನ್ನು ಫೂಲ್ಪುರ್ ನಲ್ಲಿ ಹಾಗು ಪ್ರವೀಣ್ ಕುಮಾರ್ ರನ್ನು ಗೋರಖ್ ಪುರದಲ್ಲಿ ಬಿಎಸ್  ಪಿ ಬೆಂಬಲಿಸಲಿದೆ. ಈ ಮೂಲಕ ಬಿಜೆಪಿಯನ್ನು ಸೋಲಿಸಲಾಗುವುದು ಎಂದು ಬಿಎಸ್ ಪಿ ನಾಯಕರು ತಿಳಿಸಿದ್ದಾರೆ.

ಮಾಯಾವತಿ ನಿವಾಸದಲ್ಲಿ ನಡೆದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಮಾರ್ಚ್ 11ರಂದು ಫೂಲ್ಪುರ್ ಹಾಗು ಗೋರಖ್ ಪುರದಲ್ಲಿ ಉಪಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News