ನಾಗಾಲ್ಯಾಂಡ್‍ನಲ್ಲಿ ಗೋಮಾಂಸ ಸೇವನೆ ಸಮಸ್ಯೆಯಲ್ಲ: ಕೇಂದ್ರ ಸಚಿವ ರಿಜಿಜು

Update: 2018-03-04 12:11 GMT

ಹೊಸದಿಲ್ಲಿ,ಮಾ.4: ನಾಗಾಲ್ಯಾಂಡ್ ನಲ್ಲಿ ಬೀಫ್ ಸೇವನೆ ಒಂದು ಸಮಸ್ಯೆಯಲ್ಲ ಎಂದು ಕೇಂದ್ರ ಗೃಹ ಸಹಾಯಕ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಬಿಜೆಪಿ ನಾಗಾಲ್ಯಾಂಡ್‍ನ ಅಭಿವೃದ್ಧಿಯತ್ತ ಗಮನ ಹರಿಸಲಿದೆ ಎಂದು ರಿಜಿಜು ಹೇಳಿದರು. ಹಿಂದೂಸ್ಥಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ನಾಗಾಲ್ಯಾಂಡ್‍ನಲ್ಲಿ  ಬಿಜೆಪಿಯ ಮುಂದಿನ ಯೋಜನೆಗಳ ಕುರಿತು ಅವರು ವಿವರವಾಗಿ ಮಾತಾಡಿದ್ದಾರೆ.

 "ಎನ್‍ಪಿಎಫ್‍ನೊಂದಿಗೆ  ನಮಗೆ ಸಮಸ್ಯೆಗಳಿಲ್ಲ. ಅದರೆ ಸ್ಥಾನ ಹಂಚಿಕೆ ವಿಷಯದಲ್ಲಿ ಕೆಲವು ಅಡ್ಡಿಗಳುಂಟಾದ್ದರಿಂದ ಮೈತ್ರಿ  ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಎನ್‍ಡಿಪಿಪಿಯೊಂದಿಗೆ ಸೇರಿ ಚುನಾವಣೆ ಎದುರಿಸಿದ್ದೇವೆ" ಎಂದು ಕಿರಣ್ ರಿಜಿಜು ತಿಳಿಸಿದರು.

ನಾಗಾ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಇದಕ್ಕೆ ಈಗಾಗಲೇ ಸೂಕ್ತ ಯೋಜನೆಯನ್ನು  ರೂಪಿಸಲಾಗಿದೆ. ನಾಗಾ ಜನರು ಈಗ ಬಿಜೆಪಿಯಲ್ಲಿ  ವಿಶ್ವಾಸ ಇರಿಸಿದ್ದಾರೆ. ಬಿಜೆಪಿ ನಾಗಾಲ್ಯಾಂಡ್‍ನಲ್ಲಿ 29 ಸ್ಥಾನಗಳನ್ನು ಗೆದ್ದಿದ್ದು, ಇಪ್ಪತ್ತೆಂಟು ಸ್ಥಾನಗಳಲ್ಲಿ ಎನ್‍ಪಿಎಫ್‍ಜಯಗಳಿಸಿದೆ. ಎನ್‍ಪಿಎಫ್‍ನೊಂದಿಗೆ  ಸೇರಿ ಸರಕಾರ ರಚಿಸಲಿದ್ದೇವೆ ಎಂದು ರಿಜಿಜು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News