×
Ad

ತ್ರಿಪುರಾ: ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟ ಬಿಜೆಪಿ ಮಿತ್ರಪಕ್ಷ

Update: 2018-03-04 22:22 IST

ಅಗರ್ತಲ, ಮಾ.4: ತ್ರಿಪುರಾ ಗೆಲುವಿನ ಒಂದು ದಿನದ ನಂತರ ಬಿಜೆಪಿಯ ಮಿತ್ರಪಕ್ಷ ಐಪಿಎಫ್ ಟಿ ಬುಡಕಟ್ಟು ಜನರಿಗಾಗಿ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆಯಿರಿಸಿದೆ.

“ಚುನಾವಣೆಗಳು ಬೇರೆಯದೇ ವಿಚಾರ. ತ್ರಿಪುರಾದ ಬುಡಕಟ್ಟು ಜನರಿಗಾಗಿ ಪ್ರತ್ಯೇಕ ರಾಜ್ಯ ನಮ್ಮ ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಬಗ್ಗೆ ಪರಿಶೀಲಿಸಲು ಕೇಂದ್ರ ಸರಕಾರವು ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಿದೆ ಎಂದು ನಮಗೆ ನಂಬಿಕೆಯಿದೆ” ಎಂದು ಪಕ್ಷದ ಅಧ್ಯಕ್ಷ ಎನ್.ಸಿ.ದೆಬ್ಬಾರ್ಮ ಹೇಳಿದ್ದಾರೆ.

“ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಅಧಿಕಾರದಲ್ಲಿ ಯಾವ ಪಕ್ಷವಿದ್ದರೂ ನಾವು ನಮ್ಮ ಬೇಡಿಕೆಯನ್ನು ಮಂಡಿಸಲಿದ್ದೇವೆ” ಎಂದವರು ಹೇಳಿದ್ದಾರೆ.

ಬಿಜೆಪಿ ಹಾಗು ಮಿತ್ರಪಕ್ಷ 25 ವರ್ಷಗಳ ಕಾಲ ಆಡಳಿತ ನಡೆಸಿದ್ದ ಎಡರಂಗ ಸರಕಾರವನ್ನು ಸೋಲಿಸಿ ಇತಿಹಾಸ ಬರೆದಿದೆ. ಟಕರ್ಜಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೆಬ್ಬಾರ್ಮ ಸಿಪಿಎಂನ ರಾಮೇಂದ್ರ ದೆಬ್ಬಾರ್ಮರನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News