ಟಗರುಗೆ ವಿಮರ್ಶೆ ಬರೆದ ಕಿಚ್ಚ ಸುದೀಪ್

Update: 2018-03-10 11:10 GMT

ದುನಿಯಾ ಸೂರಿ ನಿರ್ದೇಶನದ, ಶಿವರಾಜ್‌ಕುಮಾರ್ ನಾಯಕನಾಗಿರುವ ಟಗರು, ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿಯೇ ಸದ್ದುಮಾಡುತ್ತಿದೆ. ಪಕ್ಕಾ ಕಮರ್ಶಿಯಲ್ ಚಿತ್ರವಾದರೂ ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಬ್ಬರನ್ನೂ ಸೆಳೆಯುವಲ್ಲಿ ಸಫಲವಾಗಿದೆ. ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಕೂಡಾ ಈ ಚಿತ್ರವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಕನ್ನಡ ಇನ್ನೋರ್ವ ಸೂಪರ್‌ಸ್ಟಾರ್, ಕಿಚ್ಚ ಸುದೀಪ್ ಟಗರುಗೆ ಮಾರುಹೋಗಿದ್ದಾರೆ. ಅಷ್ಟೇ ಏಕೆ, ಈ ಚಿತ್ರದ ಬಗ್ಗೆ ವಿಮರ್ಶೆಯನ್ನೇ ಬರೆದುಬಿಟ್ಟಿದ್ದಾರೆ.

 ಚಿತ್ರದ ವಿಶಿಷ್ಟ ನಿರೂಪಣೆ ಕನ್‌ಫ್ಯೂಸ್ ಸೃಷ್ಟಿಸುತ್ತಲೇ ಕುತೂಹಲವನ್ನು ಮೂಡಿಸುತ್ತದೆ.ವಿಭಿನ್ನವಾಗಿ ಕಥೆ ಹೇಳುವ ಪ್ರಯತ್ನದಲ್ಲಿ ನಿರ್ದೇಶಕ ಸೂರಿ ಗೆದ್ದಿದ್ದಾರೆ. ಶಿವರಾಜ್ ಅಭಿನಯದಲ್ಲಿ ಸಾಕಷ್ಟು ಎನರ್ಜಿಯಿದೆ ಹಾಗೂ ಖಳನಾಯಕನಾಗಿ ಧನಂಜಯ್ ಅಭಿನಯ ಅದ್ಭುತ ಎಂದು ಕಿಚ್ಚ ಫುಲ್‌ಮಾರ್ಕ್ಸ್‌ಕೊಟ್ಟಿದ್ದಾರೆ. ವಸಿಷ್ಠ ಸಿಂಹರ ಧ್ವನಿ ಮೋಡಿಮಾಡುತ್ತದೆ ಎಂದು ತನ್ನ ಬ್ಲಾಗ್‌ನಲ್ಲಿ ವಿಮರ್ಶೆ ಬರೆದಿರುವ ಕಿಚ್ಚ, ನೂತನ ಸಂಗೀತ ನಿರ್ದೇಶಕ ಚರಣ್ ಅವರಿಗೂ ಅಭಿನಂದನೆ ಹೇಳಿದ್ದಾರೆ. ಒಬ್ಬ ಸೂಪರ್‌ಸ್ಟಾರ್ ಇನ್ನೋರ್ವ ಸೂಪರ್‌ಸ್ಟಾರ್‌ನ ಚಿತ್ರವನ್ನು ವೀಕ್ಷಿಸಿ, ಬಹಿರಂಗವಾಗಿ ವಿಮರ್ಶೆ ಬರೆದಿರುವುದು ಸ್ಯಾಂಡಲ್‌ವುಡ್ ಮಟ್ಟಿಗೆ ಒಂದು ಉತ್ತಮ ಬೆಳವಣಿಗೆಯಾಗಿದೆ.ಸುದೀಪ್‌ರ ಈ ಸಹೃದಯತೆ ನಿಜಕ್ಕೂ ಅಭಿನಂದನಾರ್ಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News