×
Ad

ಉತ್ತರ ಪ್ರದೇಶದಲ್ಲಿ 2 , ಬಿಹಾರದಲ್ಲಿ 1 ಲೋಕಸಭಾ ಸ್ಥಾನಕ್ಕೆ ಉಪಚುನಾವಣೆಯ ಮತದಾನ ಆರಂಭ

Update: 2018-03-11 10:14 IST

ಹೊಸದಿಲ್ಲಿ, ಮಾ.11: ಉತ್ತರ ಪ್ರದೇಶದ ಎರಡು ಲೋಕಸಭೆ, ಬಿಹಾರದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ರವಿವಾರ ಬೆಳಗ್ಗೆ ಆರಂಭಗೊಂಡಿದೆ.

ಉತ್ತರಪ್ರದೇಶದಲ್ಲಿ ಲೋಕಸಭೆಯ ಫುಲ್ಪುರ ಮತ್ತು ಗೋರಖ್ ಪುರ ಕ್ಷೇತ್ರಗಳಿಗೆ ಉಪಚುನಾವಣೆಗೆ ನಡೆಯುತ್ತಿದೆ.

ಗೋರಖ್ ಪುರ ಲೋಕಸಭಾ ಕ್ಷೇತ್ರ ಮುಖ್ಯಮಂತ್ರಿ ಆದಿತ್ಯನಾಥ್ ರಾಜೀನಾಮೆಯಿಂದಾಗಿ ಮತ್ತು ಫುಲ್ಪುರ ಕ್ಷೇತ್ರ  ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ರಾಜೀನಾಮೆಯಿಂದ ತೆರವಾಗಿತ್ತು.

ಗೋರಖ್ ಪುರ  ಕ್ಷೇತ್ರದ ಮತಗಟ್ಟೆಯಲ್ಲಿ ಮತಚಲಾಯಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬಿಜೆಪಿ ಎರಡೂ ಕ್ಷೇತ್ರಗಳಲ್ಲೂ ಜಯ ಗಳಿಸಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ಪರಿಗಣಿಸಿ ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡಲಿದ್ದಾರೆ ಎಂದರು.

ಫುಲ್ಪುರದಲ್ಲಿ ಜವಾಲದೇವಿ ಮತಗಟ್ಟೆಯಲ್ಲಿ  ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ  ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ ಚಲಾಯಿಸಿದರು. ಗೋರಖಪುರದಲ್ಲಿ 10 ಮತ್ತು ಫುಲ್ಪುರ್ ನಲ್ಲಿ 12 ಮಂದಿ ಅಭ್ಯರ್ಥಿಗಳ ಸ್ಪರ್ಧಾ ಕಣದಲ್ಲಿದ್ದಾರೆ.

ಬಿಹಾರದಲ್ಲಿ ಅರಾರಿಯಾ ಲೋಕಸಭೆ, ಭಬುವಾ ಮತ್ತು ಜೆಹಾನಬಾದ್ ವಿಧಾನಸಭಾ ಕ್ಷೇತ್ರಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಸಂಸದ ಮುಹಮ್ಮದ್ ತಸ್ಲೀಮುದ್ದಿನ್ ಅವರ ಅಕಾಲಿಕ ನಿಧನದಿಂದಾಗಿ ಬಿಹಾರದ ಆರಾರಿಯಾ ಕ್ಷೇತ್ರ ತೆರವಾಗಿತ್ತು. 

ಮೂರು ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಮಾರ್ಚ್ 14ರಂದು ಹೊರ ಬೀಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News