×
Ad

ಕಣ್ಣೂರು: ಎಸ್‍ಎಫ್‍ಐ ಕಾರ್ಯಕರ್ತನಿಗೆ ಇರಿತ

Update: 2018-03-11 13:14 IST

ತಳಿಪ್ಪರಂಬ್,ಮಾ. 11: ಕಣ್ಣೂರಿನ ತಳಿಪ್ಪರಂಬ್ ನಲ್ಲಿ ಎಸ್‍ಎಫ್‍ಐ ಕಾರ್ಯಕರ್ತನಿಗೆ ಇರಿಯಲಾಗಿದೆ. ತಳಿಪ್ಪರಂಬ್ ಆಲಿಕ್ಕುಂಪ್ಪಾನ ಎಸ್‍ಎಫ್ ಐ ಕಾರ್ಯಕರ್ತ ಎನ್‍ವಿ ಕಿರಣ್(19)ಎಂಬುವವರಿಗೆ ಇಂದು ಬೆಳಗ್ಗೆ ನಾಲ್ಕುಗಂಟೆ ಸುಮಾರಿಗೆ ತೃಚ್ಚಂಬರ ಜಾತ್ರೆ ಯಿಂದ ಮರಳುವ ವೇಳೇ ಇರಿದ ಘಟನೆ ನಡೆದಿದೆ. ಕಾಲು ಮತ್ತು ಎದೆಗೆ ಗಾಯವಾಗಿದೆ.

ಜಾತ್ರೆ ಮುಗಿದು ಮರಳುವ ವೇಳೆ ಆರೆಸ್ಸೆಸ್ ಕಾರ್ಯಾಲಯದ ಸಮೀಪದಲ್ಲಿ ಕಿರಣ್ ಮತ್ತು ಆತನ ಗೆಳೆಯರ ವಿರುದ್ಧ ದಾಳಿ ನಡೆದಿದ್ದು, ಅಸ್ವಂತ್, ಅರ್ಜುನ್ ಎಂಬವರೂ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

 ಗಾಯಾಳು ಕಿರಣ್‍ ರನ್ನು  ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದೆ. ದಾಳಿಕೋರರನ್ನು ತಡೆಯಲು ಸ್ಥಳದಲ್ಲಿ ಉಪಸ್ಥಿತರಿದ್ದ ಪೊಲೀಸರು ವಿಫರಾಗಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ. ದಾಳಿಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ತಳಿಪರಂಬ್ ಪೊಲೀಸರು ತಿಳಿಸಿದ್ದು, ಬಂಧಿಸಿದವರ ವಿವರವನ್ನು ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News