ಪಾಕ್ ಮಾಜಿ ಪ್ರಧಾನಿ ನವಾಝ್ ಶರೀಫ್ ಮೇಲೆ ಚಪ್ಪಲಿ ಎಸೆತ!
Update: 2018-03-11 21:52 IST
ಲಾಹೋರ್, ಮಾ. 11: ಪಾಕಿಸ್ತಾನದ ಲಾಹೋರ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾಜಿ ಪ್ರಧಾನಿ ನವಾಝ್ ಶರೀಫ್‌ರತ್ತ ಇಬ್ಬರು ವ್ಯಕ್ತಿಗಳು ರವಿವಾರ ಚಪ್ಪಲಿಗಳನ್ನು ಎಸೆದಿದ್ದಾರೆ.
ಇಲ್ಲಿನ ಮದರಸವೊಂದರ ಹೊರಗೆ ಸಂಘಟನೆಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಅವರು ವೇದಿಕೆಯತ್ತ ಹೋಗುತ್ತಿದ್ದಾಗ ಅವರತ್ತ ಚಪ್ಪಲಿಗಳನ್ನು ಎಸೆಯಲಾಗಿದೆ.
ಚಪ್ಪಲಿಯು ಶರೀಫ್‌ರ ಭುಜಕ್ಕೆ ಬಡಿಯಿತು.
ಅದೇ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯೂ ಶರೀಫ್‌ರತ್ತ ಚಪ್ಪಲಿ ಎಸೆದನು. ಅದು ಅವರನ್ನು ಒರೆಸಿಕೊಂಡು ಹೋಗಿ ಅವರ ಹಿಂದಿದ್ದ ವ್ಯಕ್ತಿಯೊಬ್ಬರಿಗೆ ಬಡಿಯಿತು.
ಬಳಿಕ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡರು.